ನಾಗಾಲ್ಯಾಂಡ್ನಲ್ಲೂ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವು : “ಕೈ” ತಪ್ಪಲಿದೆಯಾ ಮೇಘಾಲಯ…?
ಕೊಹಿಮಾ /ಶಿಲ್ಲಾಂಗ್ :ತ್ರಿಪುರಾದಲ್ಲಿ ಜಯದ ನಗೆ ಬೀರಿರುವ ಬೆನ್ನಲ್ಲೇ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ, ಎನ್ಡಿಪಿಪಿ ಮೈತ್ರಿಕೂಟ ಗೆಲುವು ಸಾಧಿಸಿದೆ. 33 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಅಧಿಕಾರದ ಗದ್ದುಗೆ ಏರುವ ಸಿದ್ದತೆ ನಡೆಸಿದೆ.
ಮೇಘಾಲಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ ಮೈತ್ರಿಕೂಟ ಇತರರ ಬೆಂಬಲದೊಂದಿಗೆ ಅಧಿಕಾರ ಸೂತ್ರ ಹಿಡಿಯುವ ಸಾಧ್ಯತೆಗಳನ್ನು ಹುಡುಕುತ್ತಿದೆ.
2003ರಿಂದಲೂ ಮೇಘಾಲಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ ಈ ಬಾರಿ ಅತಂತ್ರ ಸ್ಥಿತಿಗೆ ತಲುಪಿದ್ದು, 59 ಸ್ಥಾನಗಳಲ್ಲಿ ಕೇವಲ 23 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಕಾಂಗ್ರೆಸ್ನ ಬಂಡೆದ್ದ ನಾಯಕರು ನ್ಯಾಷನಲ್ ಪೀಪಲ್ಸ್ ಪಾರ್ಟಿ ಕಟ್ಟಿಕೊಂಡು 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದು ಕಾಂಗ್ರೆಸ್ಗೆ ಹೊಡೆತ ನೀಡಲಿದೆ.