ರಿಲೀಸ್‌ ಆಯ್ತು ರಂಗಸ್ಥಲಂನ Title Song : ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದ ರಾಮ್‌ ಚರಣ್ ತೇಜಾ

 

ರಾಮ್‌ ಚರಣ್‌ ತೇಜ ಹಾಗೂ ಸಮಂತಾ ಅಕ್ಕಿನೇನಿ ಅಭಿನಯದ ರಂಗಸ್ಥಲಂ ಸಿನಿಮಾದ ಟೈಟಲ್‌ ಸಾಂಗ್‌ ರಿಲೀಸ್‌ ಆಗಿದೆ. ಫೆಬ್ರವರಿ 14ರಂದು ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಮಾರ್ಚ್‌ 2ರಂದು ರಂಗಸ್ಥಲಂ ಸಿನಿಮಾದ ಟೈಟಲ್‌ ಸಾಂಗನ್ನು ರಿಲೀಸ್‌ ಮಾಡುವುದಾಗಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಹೇಳಿದ್ದರು. ಅಂತೆಯೇ ಶುಕ್ರವಾರ ಸಂಜೆ ರಂಗ ರಂಗ ರಂಗಸ್ಥಲಾ ನಾ ಎಂಬ ಮತ್ತೊಂದು ಅದ್ಭುತವಾದ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ಹಾಡಿಗೆ ಚಂದ್ರಬೋಸ್‌ ಸಾಹಿತ್ಯವಿದ್ದು, ರಾಹುಲ್‌ ಸಿಪಲಿಗುಂಜ್‌ ಹಾಡಿದ್ದಾರೆ. ಸಿನಿಮಾಗೆ ಸುಕುಮಾರ್‌ ಅವರ ನಿರ್ದೇಶನವಿದ್ದು ಇದೇ ತಿಂಗಳು 30ರಂದು ಸಿನಿಮಾ ಬಿಡುಗಡೆಯಾಗಲಿದೆ.

 

 

 

 

 

 

 

Leave a Reply

Your email address will not be published.