Mandya : ಲಿಫ್ಟ್ ಕೊಡುವುದಾಗಿ ಕಾರು ಹತ್ತಿಸಿಕೊಂಡವರು ವ್ಯಕ್ತಿಗೆ ಮಾಡಿದ್ದೇನು..?

ಪ್ರಯಾಣದ ಸಂದರ್ಭದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಅದರಲ್ಲಿಯೂ ಮಧ್ಯರಾತ್ರಿಯ ಪಯಣದಲ್ಲಿ ಆತಂಕ ಇನ್ನೂ ಹೆಚ್ಚು. ಗುರುತು ಪರಿಚಯವೇ ಇಲ್ಲದವರನ್ನು ನಂಬಿ ಜೊತೆಗೆ ಪಯಣಿಸಿದರೆ ಏನಾಗಬಹದೆಂಬುದಕ್ಕೆ ಸಾಕ್ಷಿಯಾಗಿ ಘಟನೆಯೊಂದು ಬೆಳಕಿಗೆ ಬಂದಿದೆ.

ಬೆಂಗಳೂರಿಗೆ ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿಗೆ ಹತ್ತಿಸಿಕೊಂಡ ಖದೀಮರು ದರೋಡೆ ಮಾಡಿರುವ ಘಟನೆ ಮಂಡ್ಯ ಮದ್ದೂರು ನಡುವಿನ ಮಾರ್ಗದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಬೆಂಗಳೂರಿನ ನಾಯಂಡಹಳ್ಳಿ ನಿವಾಸಿ ಜಗನ್ನಾಥ ರೆಡ್ಡಿ(೪೦) ಎಂಬುವವರು ದರೋಡೆಗೊಳಗಾಗಿದ್ದಾರೆ. ನೆನ್ನೆ ರಾತ್ರಿ ಮಂಡ್ಯದಲ್ಲಿ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ಯುವುದಾಗಿ ಹೇಳಿದ ಇಬ್ಬರು ಕಾರಿಗೆ ಹತ್ತಿಸಿಕೊಂಡು ಮಾರ್ಗ ಮದ್ಯೆ ದರೋಡೆ ಮಾಡಿದ್ದಾರೆ. ಜಗನ್ನಾಥ್ ರೆಡ್ಡಿ ಬಳಿ ಇದ್ದ ೩ ಲಕ್ಷ ರೂ ಮೌಲ್ಯದ ಕ್ಯಾಮರ,ಲ್ಯಾಪ್‌ಟಾಪ್, ATM ಕಾರ್ಡ್ ಕಸಿದು ಕಾರಿ ನಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ. ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com