13ರ ಬಾಲಕಿ ಮೇಲೆ 76ರ ವೃದ್ದನಿಂದ ಅತ್ಯಾಚಾರ : ಗರ್ಭಿಣಿಯಾದ ಬಾಲಕಿ

ಹೈದರಾಬಾದ್‌ : 76 ವರ್ಷದ ವೃದ್ಧನೊಬ್ಬ 13 ವರ್ಷದ ಬಾಲಕಿಗೆ ಚಾಕಲೇಟ್‌, ತಿಂಡಿಯ ಆಸೆ ತೋರಿಸಿ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ಬಾಲಕಿ ಈಗ ಗರ್ಭಿಣಿಯಾಗಿರುವುದಾಗಿ ತಿಳಿದುಬಂದಿದೆ.

ಆರೋಪಿ ಹಬೀಬ್‌ ನಗರದ ಅಘಾಪುರ್‌ನ ವಾಹಬ್‌ ಎಂದು ತಿಳಿದುಬಂದಿದ್ದು, ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಈತ 2017ರ ಜೂನ್ ತಿಂಗಳಿನಿಂದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದು, ಯಾರಿಗೂ ಹೇಳಬೇಡ ಎಂದು ಆಕೆಗೆ ಸಿಹಿತಿಂಡಿ ಕೊಡಿಸುತ್ತಿದ್ದ ಎಂದು ತಿಳಿದುಬಂದಿದೆ. ಬಾಲಕಿಯ ದೇಹದಲ್ಲಿ ಕೆಲ ಬದಲಾವಣೆಗಳಾಗಿದ್ದಲ್ಲದೆ ಅನೇಕ ಬಾರಿ ಹೊಟ್ಟೆನೋವು ಎಂದು ಹೇಳುತ್ತಿದ್ದಳು. ಈ ವೇಳೆ ಬಾಲಕಿಯನ್ನು ವೈದ್ಯರ ಬಳಿ ತೋರಿಸಿದಾಗ ಆಕೆ ಗರ್ಭಿಣಿ ಎಂಬ ವಿಚಾರ ತಿಳಿದುಬಂದಿದೆ.

ಕಂಗಾಲಾದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

 

Leave a Reply

Your email address will not be published.