ತ್ರಿಪುರಾದಲ್ಲಿ BJP ಗೆಲುವು ಪ್ರಜಾಪ್ರಭುತ್ವಕ್ಕೆ ಸಂದ ಜಯ : ಮೋದಿ Tweet

ದೆಹಲಿ : ಈಶಾನ್ಯದ ಮೂರು ರಾಜ್ಯಗಳ ಪೈಕಿ ತ್ರಿಪುರಾದಲ್ಲಿ ಬಿಜೆಪಿ ಬಹುಮತದೊಂದಿಗೆ ಜಯಗಳಿಸಿದ್ದು, ಇದು ಕ್ರೂರತನ ಹಾಗೂ ಭಯೋತ್ಪಾದನೆಯ ವಿರುದ್ಧ ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಟ್ವೀಟ್ ಮಾಡಿರುವ ಮೋದಿ, ಜನರಿಗೆ ಧನ್ಯವಾದ ಅರ್ಪಿಸಿದ್ದು, ಜನರು ಉತ್ತಮ ಸರ್ಕಾರವನ್ನು ಬೆಂಬಲಿಸಿದ್ದಾರೆ. ಅಭಿವೃದ್ಧಿಯೆಡೆಗೆ ಬಿಜೆಪಿಗಿರುವ ಕಾಳಜಿ ಏನೆಂಬುದು ಜನರಿಗೆ ಅರ್ಥವಾಗಿದೆ. ಜನರ ಮತ್ತಷ್ಟು ಬೇಡಿಕೆಗಳನ್ನು ಈಡೇರಿಸಲು ಬಿಜೆಪಿ ಎಂದಿಗೂ ಕಟಿ ಬದ್ದವಾಗಿರುವುದಾಗಿ ಟ್ವೀಟ್‌ ಮಾಡಿದ್ದಾರೆ.

Leave a Reply

Your email address will not be published.