ಈಶಾನ್ಯ ರಾಜ್ಯಗಳಾಯ್ತು ಈಗ ಕರ್ನಾಟಕ ನಮ್ಮ ಗುರಿ : ಅಮಿತ್ ಶಾ

ದೆಹಲಿ : ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಗೆಲುವು ಪ್ರಧಾನಿ ಮೋದಿಯವರ ಕೆಲಸಕ್ಕೆ ಸಂದ ಗೆಲುವಾಗಿದ್ದು, ಕರ್ನಾಟಕವೇ ನಮ್ಮ ಮುಂದಿನ ಗುರಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಚುನಾವಣೆಯ ಗೆಲುವಿನ ಬಳಿಕ ದೆಹಲಿಯಲ್ಲಿಂದು ಮಾತನಾಡಿದ ಅಮಿತ್ ಶಾ, ತ್ರಿಪುರಾದಲ್ಲಿ ಸ್ಪಷ್ಟ ಬಹುಮತ ಸಿಕ್ಕಿದೆ. ನಾಗಾಲ್ಯಾಂಡ್ನಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ. ಈ ಮೂಲಕ ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಈಗ ನಮ್ಮ ಗುರಿ ಕರ್ನಾಟಕದ ಕಡೆ ಇದೆ. ಕರ್ನಾಟಕದಲ್ಲೂ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಒಡಿಶಾ, ಪಶ್ಚಿಮ ಬಂಗಾಳ, ಹಾಗೂ ಕೇರಳದಲ್ಲಿ ಬಿಜೆಪಿ ಜಯ ಗಳಿಸುವವರೆಗೂ ಸುವರ್ಣ ಯುಗ ಆರಂಭವಾಗಲು ಸಾಧ್ಯವಿಲ್ಲ. ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಸುವರ್ಣ ಯುಗ ಪ್ರಾರಂಭವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com