ಚಾರ್ಜ್‌ಶೀಟ್‌ನಲ್ಲಿ ಯಡವಟ್ಟು : ಇದು ಕಾಂಗ್ರೆಸ್‌ ಕುತಂತ್ರವೆಂದ R ಅಶೋಕ್‌

ಬೆಂಗಳೂರು : ಬಿಜೆಪಿ ಚಾರ್ಜ್‌ಶೀಟ್‌ನಲ್ಲಿ ನೇಪಾಳ ಹಾಗೂ ಮಿಜೋರಾಂ ಫೋಟೋ ಬಳಕೆ ವಿಚಾರ ಸಂಬಂಧ ಬಿಜೆಪಿ ನಾಯಕ ಆರ್‌. ಅಶೋಕ್ ಹಾರಿಕೆಯ ಉತ್ತರ ನೀಡಿದ್ದಾರೆ.

ನಮ್ಮ ಟಾರ್ಗೆಟ್ ರಾಜ್ಯ ಸರ್ಕಾರ. ಕರ್ನಾಟಕ ಗೂಂಡಾ ರಾಜ್ಯವಾಗಿದೆ, ರಾಹುಲ್ ಗಾಂಧಿ ಕಾಲಿಟ್ಟ ಕಡೆಯಲ್ಲಿ‌ ಕಾಂಗ್ರೆಸ್ ನಿರ್ನಾಮ ಆಗಿದೆ. ರಾಹುಲ್ ಕರ್ನಾಟಕಕ್ಕೂ ಬಂದಿದ್ದಾರೆ ಇಲ್ಲೂ ಕಾಂಗ್ರೆಸ್ ನಿರ್ನಾಮ ಮಾಡಲಿ.ನಮ್ಮ ಚಾರ್ಜ್ ಶೀಟ್ ಉಸ್ತುವಾರಿ ವಹಿಸಿದ್ದೇ ಪ್ರಕಾಶ್ ಜಾವ್ಡೇಕರ್.ಹಾಗಾಗಿ ಇದರಲ್ಲಿ ಕೇಂದ್ರ ನಾಯಕರು ತರಾಟೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಜಾರ್ಜ್ ಶೀಟ್ ಸಿದ್ದಗೊಂಡ ನಂತರ‌ ಕೇಂದ್ರದ ನಾಯಕರೇ ಅದಕ್ಕೆ ಅನುಮೋದನೆ ನೀಡಿದ್ದಾರೆ. ಆದ್ರೆ ಇದರಲ್ಲಿ ಆದ ಎಡವಟ್ಟಿನ ಬಗ್ಗೆ ಬಿಜೆಪಿ ಮಾದ್ಯಮ ಟೀಮ್ ಉತ್ತರ‌ ನೀಡುತ್ತದೆ. ಇದು ಕಾಂಗ್ರೆಸ್ ಮಾಡ್ತಿರುವ ಅಪಪ್ರಚಾರ, ಕುತಂತ್ರ. ಸಾಮಾಜಿಕ ಜಾಲ ತಾಣದಲ್ಲಿ‌ ಕಾಂಗ್ರೆಸ್‌ನವರೇ  ಹೀಗೆ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 

 

 

Leave a Reply

Your email address will not be published.