ವಿಶೇಷ ಮೂಗಿರುವವರಿಗೆ ಎಲ್ಲದರಲ್ಲೂ ಲಂಚದ ವಾಸನೆ ಬರುತ್ತದೆ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೂ ಅದರಲ್ಲಿ ಭ್ರಷ್ಟಾಚಾರವಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಕೆಲವರಿಗೆ ವಿಶೇಷವಾದ ಮೂಗಿದೆ ಅದಕ್ಕೇ ಆವರಿಗೆ ಲಂಚದ ವಾಸನೆ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.

ನವ ಕರ್ನಾಟಕ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್‌ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ನವ ಕರ್ನಾಟಕ ವಿಷನ್‌ 2050ರ ಅನಷ್ಠಾನಕ್ಕೆ ಮುನ್ನೋಟ ಬೇಕು. ಇದರಲ್ಲಿ ಬದಲಾವಣೆಗಳನ್ನು ಮಾಡುವುದು, ಹೊಸ ಅಂಶಗಳ ಸೇರ್ಪಡೆ ಮಾಡುವುದು ನಿರಂತರ ಪ್ರಕ್ರಿಯೆ. ಮುಂದಿನ  ಬಾರಿ ಅಧಿಕಾರಕ್ಕೆ ಬಂದ ಮೇಲೆ ಆ ಕೆಲಸವನ್ನೂ ಮಾಡುವುದಾಗಿ ಹೇಳಿದ್ದಾರೆ.

 

 

Leave a Reply

Your email address will not be published.