Asian Games : ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ನವಜೋತ್ ಕೌರ್

ಏಷ್ಯನ್ ಗೇಮ್ಸ್ ಕುಸ್ತಿ ಚಾಂಪಿಯನ್ಷಿಪ್ ನ ಮಹಿಳೆಯರ 65 ಕೆ.ಜಿ ವಿಭಾಗದಲ್ಲಿ ಭಾರತದ ನವಜೋತ್ ಕೌರ್ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಶುಕ್ರವಾರ ಕಿರಗಿಸ್ತಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್ ದೇಶದ ಇಮಾಯಿ ಮಿಯು ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದಾರೆ.

28 ವರ್ಷದ ನವಜೋತ್ ಕೌರ್ ಏಷ್ಯನ್ ಗೇಮ್ಸ್ ಕುಸ್ತಿಯಲ್ಲಿ ಸ್ವರ್ಣ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ನವಜೋತ್ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ (2011), ಬೆಳ್ಳಿ ಪದಕ (2013), ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ (2014) ಗೆದ್ದಿದ್ದರು.

ಮಹಿಳೆಯರ 62 ಕೆಜಿ ವಿಭಾಗದ ಕುಸ್ತಿ ಚಾಂಪಿಯನ್ಷಿಪ್ ನಲ್ಲಿ ಓಲಿಂಪಿಕ್ ಪದಕ ವಿಜೇತೆಯಾದ ಭಾರತದ ಸಾಕ್ಷಿ ಮಲಿಕ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com