ಕೊನೆಯಾಯ್ತು ಮಾಣಿಕ್‌ ಸರ್ಕಾರ್ ಆಡಳಿತ : ತ್ರಿಪುರಾದಲ್ಲಿ BJP ಭರ್ಜರಿ ಗೆಲುವು

ಅಗರ್ತಲಾ : ಈಶಾನ್ಯ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್‌ ಹಾಗೂ ಮೇಘಾಲಯ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ತ್ರಿಪುರಾದಲ್ಲಿ 25 ವರ್ಷಗಳ ಸಿಪಿಐಎಂ ಆಡಳಿತ ಕೊನೆಗೊಂಡು ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಒಟ್ಟು 60 ಸದಸ್ಯ ಬಲವಿರುವ ವಿಧಾನಸಭೆಯಲ್ಲಿ 42 ಸ್ಥಾನ ಗಳಿಸುವ ಮೂಲಕ ಬಿಜೆಪಿ ಹಾಗೂ ಮಿತ್ರಪಕ್ಷ ಇಂಡಿಜಿನಸ್‌ ಪೀಪಲ್ಸ್‌ ಫ್ರಂಟ್‌ ಆಫ್‌ ತ್ರಿಪುರಾ (ಐಪಿಎಫ್‌ಟಿ) ಜಯಗಳಿಸಿದೆ. ಸರಳ ಬಹುಮತ ಪಡೆಯಲು 31 ಸದಸ್ಯಬಲವಿರುವ ತ್ರಿಪುರಾದಲ್ಲಿ ಅದಕ್ಕಿಂತಲೂ ಹೆಚ್ಚು 11 ಸ್ಥಾನಗಳನ್ನು ಗೆದ್ದಿದೆ.

ಈ ಮೂಲಕ ಇಡೀ ಭಾರತದಲ್ಲಿ 21 ರಾಜ್ಯಗಳಲ್ಲಿ ಕಮಲ ಅರಳಿದಂತಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com