Sachin ಡ್ರೆಸಿಂಗ್ ರೂಂ ಸೀಕ್ರೆಟ್ ಹೇಳಿದ Ganguly : ಲಾರ್ಡ್ಸ್ ಟೆಸ್ಟ್ ನಲ್ಲಿ ನಡೆದದ್ದೇನು..?
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ‘ ಎ ಸೆಂಚುರಿ ಈಸ್ ನಾಟ್ ಇನಫ್ ‘ ಹೆಸರಿನ ತಮ್ಮ ಆತ್ಮಕಥೆಯಲ್ಲಿ ವೃತ್ತಿ ಜೀವನದ ಅನೇಕ ಘಟನೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಎಡಗೈ ಬ್ಯಾಟ್ಸಮನ್ ಸೌರವ್ ಗಂಗೂಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹಲಾವರು ವರ್ಷ ಕ್ರಿಕೆಟ್ ಆಡಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೌರವ್, ಡ್ರೆಸಿಂಗ್ ರೂಮಿನಲ್ಲಿ ಸಚಿನ್ ತೆಂಡೂಲ್ಕರ್ ತಮಗೆ ಮಾಡಿದ ಸಹಾಯದ ಬಗ್ಗೆ ಹೇಳಿದ್ದಾರೆ.
1995 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೂಲಕ ಸೌರವ್ ಗಂಗೂಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಪಂದ್ಯದ ಮೂರನೇ ದಿನದ ಚಹಾ ವಿರಾಮದ ವೇಳೆಗೆ ಸೌರವ್ ಶತಕ ಬಾರಿಸಿ ಅಜೇಯರಾಗುಳಿದಿದ್ದರು. ಆದರೆ ದಾದಾ ಬ್ಯಾಟ್ ನಲ್ಲಿ ಸೀಳು ಉಂಟಾಗಿತ್ತು. ಚಹಾ ವಿರಾಮದಲ್ಲಿ ಕೇವಲ 15 ನಿಮಿಷ ಮಾತ್ರ ಸಮಯವಿತ್ತು. ಆಗ ಸೌರವ್ ಗೆ ಚಹಾ ಸೇವಿಸಲು ಹೇಳಿದ ಸಚಿನ್, ಬ್ಯಾಟಿಗೆ ತಾವೇ ಟೇಪ್ ಸುತ್ತಿ ಸರಿ ಮಾಡಿದ್ದರಂತೆ.