ಶಾಸಕರ ಪುತ್ರನಿಗೆ Black Friday : ಜೈಲುಪಾಲಾದ ನಲಪ್ಪಾಡ್‌ : ಜಾಮೀನು ಅರ್ಜಿ ವಜಾ

ಬೆಂಗಳೂರು : ವಿದ್ವತ್‌ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಜೈಲುಪಾಲಾಗಿರುವ ಶಾಸಕ ಹ್ಯಾರಿಸ್‌ ಪುತ್ರ ನಲಪ್ಪಾಡ್‌ನ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.

ಇಂದು ಜಾಮೀನು ರ್ಜಿ ವಿಚಾರಣ ನಡೆಸಿದ 63ನೇ ಸೆಷನ್ಸ್‌ ನ್ಯಾಯಾಲಯ, ನಲಪ್ಪಾಡ್‌ ಹಾಗೂ ಆತನ ತಂಡದ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಧೀಶ ಪ್ರಸನ್ನ ತೀರ್ಪು ನೀಡಿದ್ದಾರೆ. ಅಲ್ಲದೆ ಆರೋಪಿ ನಲಪ್ಪಾಡ್‌ ಪ್ರಭಾವಿಯಾಗಿರುವ ಹಿನ್ನೆಲೆಯಲ್ಲಿ  ಆತನಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಎಂದೂ ಆದೇಶದಲ್ಲಿ ನಮೂದಿಸಿರುವುದಾಗಿ ತಿಳಿದುಬಂದಿದೆ.

ಈ ಹಿಂದೆ ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಕೋರ್ಟ್‌ ಕಾಯ್ದಿರಿಸಿತ್ತು. ಆರೋಪಿ ನಲಪ್ಪಾಡ್‌ ಪರ ಸಬಾಸ್ಟಿಯನ್‌ ಹಾಗೂ ವಿದ್ವತ್‌ ಪರ ಶ್ಯಾಮ್ ಸುಂದರ್‌ ಪ್ರತಿವಾದ ಮಂಡಿಸಿದ್ದರು.

ಇನ್ನು ತೀರ್ಪು ಹೊರಬೀಳುತ್ತಿದ್ದಂತೆಯೇ ನಲಪ್ಪಾಡ್‌ ಕುಸಿದು ಬಿದ್ದಿರುವುದಾಗಿ ಮೂಲಗಳು ತಿಳಿಸಿವೆ. ಬಳಿಕ ಜೈಲು ಅಧಿಕಾರಿಗಳು ಆತನಿಗೆ ನೀರು ಕುಡಿಸಿ ಬಳಿಕ ಜೈಲಿಗೆ ಕರೆದೊಯ್ದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com