Jammu : ತಾಯಿಯ ಕಣ್ಣೀರಿಗೆ ಕರಗಿದ ಈ ಉಗ್ರ ಮಾಡಿದ್ದೇನು…?

ಶ್ರೀನಗರ : ಉಗ್ರರಿಗೆ ಮಾನವೀಯತೆ ಇರುವುದಿಲ್ಲ. ಅವರ ಬಳಿ ಯಾರ ಭಾವನೆಗಳಿಗೂ ಬೆಲೆಯಿರುವುದಿಲ್ಲ ಎಂಬುವುದು ಸಾಮಾನ್ಯವಾದ ಮಾತು. ಆದರೆ ಉಗ್ರನೊಬ್ಬ ತಾಯಿಯ ಕಣ್ಣೀರಿಗೆ ಕರಗಿ ಉಗ್ರವಾದವನ್ನು ಬಿಟ್ಟು ಮನೆಗೆ ಬಂದಿರುವ ಸಂಗತಿ ಜಮ್ಮುವಿನಲ್ಲಿ ನಡೆದಿದೆ.

ಈ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು  ಹೇಳಿಕೆ ನೀಡಿದ್ದು, ತಾಯಿಯ ಕಣ್ಣೀರನ್ನು ನೋಡಿ ಅದರಿಂದ ಮರುಕಪಟ್ಟ ಯುವಕ ಉಗ್ರವಾದವನ್ನು ಬಿಟ್ಟು ಬಂದಿದ್ದಾನೆ ಎಂದಿದ್ದಾರೆ. ಆದರೆ ಆತನ ಹೆಸರು ಹಾಗೂ ಇತರೆ ಮಾಹಿತಿಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ಉಗ್ರ ಸಂಘಟನೆಗೆ ಸೇರಿಕೊಂಡಿದ್ದ ನಾಲ್ವರು ಯುವಕರು ಕಳೆದ ವರ್ಷ ತಾಯಿಗಾಗಿ ವಾಪಸ್‌ ಮನೆಗೆ ಬಂದಿದ್ದರು. ಇದಕ್ಕೂ ಮುನ್ನ ಪಾಕಿಸ್ತಾನಿ ಬೆಂಬಲಿತ ಉಗ್ರ ಸಂಘಟನೆಗೆ ಸೇರಿದ್ದ ಡ್ಯಾನಿಶ್‌ ಎಂಬ ಯುವಕ ಸಹ ತಾಯಿಯ ಕಣ್ಣೀರಿಗೆ ಕರಗಿ ಮನೆ ಸೇರಿಕೊಂಡಿದ್ದನು.

ಈಗ ಮತ್ತೊಬ್ಬ ಯುವಕ ಉಗ್ರವಾದವನ್ನು ಬಿಟ್ಟು ತಾಯಿಗಾಗಿ ಮನೆಕಡೆ ಮುಖ ಮಾಡಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com