ಛತ್ತೀಸ್ ಗಢ್ : ಎನ್ಕೌಂಟರ್ ನಲ್ಲಿ ಪ್ರಮುಖ ನಾಯಕ ಸೇರಿ 10 ಮಾವೋವಾದಿಗಳ ಹತ್ಯೆ

ಛತ್ತೀಸ್ ಗಢದ ಬಸ್ತಾರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ರಕ್ಷಣಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ ಕನಿಷ್ಟ 10 ಮಾವೋವಾದಿಗಳು ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ ಪ್ರಮುಖ ಮಾವೋ ನಾಯಕನೆಂದು ಗುರುತಿಸಿಕೊಂಡಿದ್ದ ಹರಿ ಭೂಷಣ್ ಕೂಡ ಸೇರಿದ್ದಾನೆ.

‘ ಶುಕ್ರವಾರ ಬೆಳಗಿನ ಹೊತ್ತು ಬಸ್ತಾರ್ ಜಿಲ್ಲೆಯ ಪೂಜಾರಿ ಕಂಕೆರ್ ಪ್ರದೇಶದಲ್ಲಿ ಎನ್ಕೌಂಟರ್ ಆರಂಭವಾಯಿತು. ಇದರಲ್ಲಿ 10 ಜನ ಮಾವೋ ಬಂಡುಕೋರರು ಪ್ರಾಣ ಕಳೆದುಕೊಂಡಿದ್ದಾರೆ ‘ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ವಿಶೇಷ ಡೈರೆಕ್ಟರ್ ಜನರಲ್ ಆಗಿರುವ ಡಿಎಮ್ ಅವಸ್ಥಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ ಬಂಡುಕೋರರು ಪ್ರತಿಯಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಆ್ಯಂಟಿ ನಕ್ಸಲ್ ದಳದ ಒಬ್ಬ ಯೋಧ ಹತನಾಗಿದ್ದು, ಇನ್ನು ಮೂವರು ಗಾಯಗೊಂಡಿದ್ದಾರೆ. ಅವರನ್ನು ಭದ್ರಾಚಲಮ್ ಆಸ್ಪತ್ರೆಗೆ ಸೇರಿಸಲಾಗಿದೆ ‘ ಎಂದು ಅವಸ್ಥಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com