ನನ್ನತ್ರ ಹುಡುಗಾಟ ಮಾಡ್ಬೇಡಿ ಸಿದ್ದರಾಮಯ್ಯನವರೇ : CM ಗೆ ಕುಮಾರಸ್ವಾಮಿ ಎಚ್ಚರಿಕೆ

ಮಂಡ್ಯ : ಕರ್ನಾಟಕ ಸೋಲಾರ್ ಉತ್ಪಾದನೆಯಲ್ಲಿ ಪ್ರಪಂಚದ ಎಂಟನೇ ಅದ್ಭುತ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಹೇಳಿಕೆ ನನಗೆ ಆಶ್ಚರ್ಯಕರವಾಗಿದೆ, ಸೋಲಾರ್ ವಿದ್ಯುಚ್ಛಕ್ತಿಯನ್ನು ಈಗಾಗಲೇ ಹಲವಾರು ದೇಶಗಳು ಹಲವಾರು ರಾಜ್ಯಗಳು ಸಾವಿರಾರು ಮೆಗಾವ್ಯಾಟ್ ಉತ್ಪಾದನೆ ಮಾಡ್ತಿದೆ. ಈ ಪ್ರಪಂಚದಲ್ಲಿ ಮೊದಲನೇ ಬಾರಿಗೆ ನೀವು ಉತ್ಪಾದನೆ ಮಾಡ್ತಿದ್ದೀರ ? ಎಂದು ಎಚ್‌. ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಂಡ್ಯದಲ್ಲಿ ನಡೆದ ಕುಮಾರಪರ್ವ ಯಾತ್ರೆಯಲ್ಲಿ ಮಾತನಾಡಿದ ಅವರು, ನನ್ನ ಅಭಿಪ್ರಾಯದಲ್ಲಿ ಸಿದ್ದರಾಮಯ್ಯರನ್ನು ಹುರುಳಿಕಾಳು ಮಗ ಅಂತ ಕರಿಬೇಕು. ಮಂಡ್ಯದ ರೈತರು ಭತ್ತ ಕಬ್ಬು ಬೆಳೆದು ಜೀವನ ಮಾಡ್ತಿದ್ರು. ಒಂದು ಬೆಳೆ ಭತ್ತ ಬೆಳೆಯಲು ಅವಕಾಶ ಕೊಡಲಿಲ್ಲ ಈ ಸರ್ಕಾರ. ನಾನು ಇಸ್ರೇಲ್ ಗೆ ಹೋಗಿ ಕೃಷಿ ಅಧ್ಯಯನ ಮಾಡಿದ್ದನ್ನ ಲಘುವಾಗಿ ಮಾತನಾಡ್ತಾರೆ. ಕಳೆದ ಮೂರುವರೆ ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದೀರ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯನ್ನ ಚರ್ಚೆಗೆ ಬನ್ನಿ ಅಂತೀರ, ತಾಕತ್ ಇದ್ರೆ ನನ್ನೊಂದಿಗೆ ಚರ್ಚೆಗೆ ಬನ್ನಿ. ನೀವು ಏನೇನು ಮಾಡಿದ್ದೀರೋ ಎಲ್ಲ ಬಂಡವಾಳವನ್ನು ಬಯಲುಮಾಡ್ತೀನಿ. ನನ್ನ ಬಳಿ ಹುಡುಗಾಟ ಮಾಡಿ, ಜೆಡಿಎಸ್‌ ಬಗ್ಗೆ ಉಡಾಫೆ ಮಾಡುವುದನ್ನು ಮೊದಲು ಬಿಡಿ ಎಂದಿದ್ದಾರೆ.

 

One thought on “ನನ್ನತ್ರ ಹುಡುಗಾಟ ಮಾಡ್ಬೇಡಿ ಸಿದ್ದರಾಮಯ್ಯನವರೇ : CM ಗೆ ಕುಮಾರಸ್ವಾಮಿ ಎಚ್ಚರಿಕೆ

  • March 2, 2018 at 7:29 PM
    Permalink

    ಗೌಡರ ಕುಟುಂಬದ ಎಲ್ಲಾ ಮಾತುಗಳೂ ಈಗ ಅಪ್ರಸ್ತುತ

    Reply

Leave a Reply

Your email address will not be published.