ಹಿಂದೂಗಳ ಜಾಗದಲ್ಲಿ ನಿರ್ಮಾಣವಾಗಿರೋ ಮಸೀದಿಯನ್ನು ವಾಪಸ್‌ ನೀಡಿ : ಮುಸ್ಲಿಂ ಮುಖಂಡ

ಲಖನೌ : ದೇಶಾದ್ಯಂತ ಹಿಂದೂಗಳ ಜಾಗದಲ್ಲಿ ನಿರ್ಮಾಣವಾಗಿರುವ 9 ಮಸೀದಿಗಳನ್ನು ಮರಳಿ ಹಿಂದೂಗಳಿಗೆ ಮರಳಿಸಬೇಕು ಎಂದಿರುವ ಶಿಯಾ ವಕ್ಫ್‌  ಮಂಡಳಿ ಅಧ್ಯಕ್ಷ ರಿಜ್ವಿ ವಿರುದ್ದ ದೂರು ದಾಖಲಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.

ದೇಶಾದ್ಯಂತ ಹಿಂದೂ ದೇವಾಲಯಗಳನ್ನು ಕೆಡವಿ ಅವುಗಳ ಜಾಗದಲ್ಲಿ ಮಸೀದಿಗಳನ್ನು ಕಟ್ಟಲಾಗಿದೆ. ಅಂತಹ ಹಿಂದೂಗಳ ಜಾಗವನ್ನು ಹಿಂದೂಗಳಿಗೆ ಮರಳಿ ನೀಡಬೇಕು ಎಂದು ಗುರುವಾರವಷ್ಟೇ ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಪತ್ರ ಬರೆದಿದ್ದರು.

ಈ ಕುರಿತು ಕಾನೂನು ಮಂಡಳಿ ಮುಖ್ಯಸ್ಥ ಜಫರಾರ್ಯಬ್‌ ಪ್ರತಿಕ್ರಿಯಿಸಿದ್ದು, ನನಗೆ ರಿಜ್ವಿ ಅವರಿಂದ ಯಾವುದೇ ಪತ್ರ ಬಂದಿಲ್ಲ. ಪತ್ರ ಬಂದ ಕೂಡಲೆ ರಿಜ್ವಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com