ಒಗ್ಗಟ್ಟಿನ ವಿಚಾರದಲ್ಲಿ ತಮಿಳುನಾಡು ರಾಜಕಾರಣಿಗಳನ್ನು ನೋಡಿ ಕಲಿಬೇಕು : HDD

ಹಾಸನ : ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದ್ರೆ ರಾಜ್ಯಕ್ಕೆ ಮತ್ತೆ ತೊಂದರೆ ಎದುರಾಗಲಿದೆ. ಈ ವಿಚಾರದಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ದನಿ ಎತ್ತಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ಹಾಸನದ ಗೊರೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಒಗ್ಗಟ್ಟು ಪ್ರದರ್ಶನ ಬಗ್ಗೆ ತಮಿಳುನಾಡಿನ ರಾಜಕೀಯ ನಾಯಕರನ್ನು ನೋಡಿ ನಾವು ಕಲಿಯಬೇಕಿದೆ. ನಾನು ಮೂರ್ನಾಲ್ಕು ದಿನಗಳಲ್ಲಿ ‌ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡುವೆ. ಇದಕ್ಕಾಗಿ ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಚಿವರ ಭೇಟಿ ವೇಳೆ ಎಲ್ಲವನ್ನೂ ಮನವರಿಕೆ ಮಾಡುವೆ ಎಂದಿದ್ದಾರೆ.
ಸುಪ್ರೀಂ ಸೂಚನೆಯಂತೆ ‌ನಿರ್ವಹಣಾ ಮಂಡಳಿ ಕಷ್ಟಸಾಧ್ಯ ಎಂದು ಜಲಸಂಪನ್ಮೂಲ ಸಚಿವ ಗಡ್ಕರಿ ಹೇಳಿದ್ದರು. ಈ ಹೇಳಿಕೆ ರಾಜ್ಯಕ್ಕೆ ತಕ್ಷಣಕ್ಕೆ ಬೀಳಬಹುದಾಗಿದ್ದ ಪೆಟ್ಟನ್ನು ದೂರ ಮಾಡಿದೆ. ಈ ಕಾರಣಕ್ಕೆ ನಾನು ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ನನ್ನ ನಾಡಿನ ಜನರಿಗೆ ಅನುಕೂಲವಾಗುವ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com