ಕಾಲನಾಗಿ ಬಂದ ರಜಿನೀಕಾಂತ್‌ : ಟೀಸರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 12 ಲಕ್ಷ ವೀಕ್ಷಣೆ

ಸೂಪರ್‌ ಸ್ಟಾರ್‌ ರಜಿನೀಕಾಂತ್‌ ಅಭಿನಯದ ಬಹು ನಿರೀಕ್ಷಿತ ಕಾಲ ಸಿನಿಮಾದ ಟೀಸರ್‌ ರಿಲೀಸ್ ಆಗಿದ್ದು, ಎಲ್ಲೆಡೆ ಹವಾ ಸೃಷ್ಠಿಸಿದೆ.

ಫೆಬ್ರವರಿ 28ರಂದೇ ಸಿನಿಮಾದ ಟೀಸರ್‌ ಬಿಡುಗಡೆಯಾಗಬೇಕಿತ್ತು. ಆದರೆ ಕಂಚಿ ಶ್ರೀಗಳು ನಿಧನರಾದ ಹಿನ್ನೆಲೆಯಲ್ಲಿ ಟೀಸರ್‌ ಬಿಡುಗಡೆಯನ್ನ ಮುಂದೂಡಲಾಗಿತ್ತು. ಈ ಬಗ್ಗೆ ರಜಿನೀಕಾಂತ್ ಅಳಿಯ ಧನುಷ್ ಸಹ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು ಮಾರ್ಚ್‌ 2 ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ಅಂತೆಯೇ ಇದು ಕಾಲ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 13 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅಭಿಮಾನಿಗಳಿಗೆ ಥ್ರಿಲ್‌ ನೀಡುವಂತಹ ಡೈಲಾಗ್‌ಗಳಿದ್ದು. ರಜಿನಿಕಾಂತ್‌ ಹೀರೋ ಆಗಿರುವ ಈ ಸಿನಿಮಾದಲ್ಲಿ ನಾನಾ ಪಾಟ್ಕರ್‌ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಕಬಾಲಿ ಸಿನಿಮಾದ ನಿರ್ದೇಶಕರಾಗಿದ್ದ ಪ. ರಂಜಿತ್‌ ಈ ಸಿನಿಮಾಗೂ ನಿರ್ದೇಶನ ಮಾಡಿದ್ದಾರೆ. ಅಳಿಯ ಧನುಷ್‌ ಅವರ ಬ್ಯಾನರ್‌ನಡಿ ಸಿನಿಮಾ ಮೂಡಿಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com