ಜಾಕ್ವೆಲಿನ್ ಫರ್ನಾಂಡಿಸ್ ಮೇಲೆ ಟ್ವೀಟಿಗರ ಆಕ್ರೋಶ : ನಟಿ ಮಾಡಿದ ತಪ್ಪೇನು..?

ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ಬಾಲಿವುಡ್ ನಟಿ ಶ್ರೀದೇವಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ದಶಕಗಳವರೆಗೆ ಸಿನೆಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮರೆದಿದ್ದ ಶ್ರೀದೇವಿಯವರ ಅಂತ್ಯಕ್ರಿಯೆ ಮುಂಬೈನಲ್ಲಿ ಬುಧವಾರ ಜರುಗಿತು.

ಅಂತಿಮ ನಮನ ಸಲ್ಲಿಸಲು ಬಾಲಿವುಡ್ ನ ಹಲವಾರು ಗಣ್ಯರು ಆಗಮಿಸಿದ್ದರು. ಶ್ರೀದೇವಿಯವರ ಅಂತ್ಯಕ್ರಿಯೆಯಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಪಾಲ್ಗೊಂಡಿದ್ದರು. ಇದೀಗ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಜಾಕ್ವೆಲಿನ್ ನಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾವಿನ ಮನೆಯಲ್ಲಿ ಜಾಕ್ವೆಲಿನ್ ಅವರು ತೋರಿದ ವರ್ತನೆ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

At Sridevi's Funeral, Jacqueline Fernandez Spotted Smiling In A Pic. Twitter Is Angry

ದುಃಖ ಮಡುಗಟ್ಟಿದ ವಾತಾವರಣದ ಸಾವಿನ ಮನೆಯಲ್ಲಿ ಗಂಭೀರವಾಗಿ ಇರಬೇಕು. ಆದರೆ ಜಾಕ್ವೆಲಿನ್ ನಗುತ್ತಿರುವುದರ ಕಾರಣದಿಂದಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com