ಎಲ್ಲೆಡೆ ಹೋಳಿ ಸಂಭ್ರಮ : ವಯಸ್ಸಿನ ಬೇಧವಿಲ್ಲದೆ ಬಣ್ಣಗಳಲ್ಲಿ ಮಿಂದೆದ್ದ ಜನತೆ

ದಾವಣಗೆರೆ / ಹಂಪಿ / ಬೆಂಗಳೂರು : ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ದಾವಣಗೆರೆ, ಹಂಪಿ, ವಿಜಯಪುರ, ರಾಯಚೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ.

ಗುರುವಾರ ರಾತ್ರಿ ದಾವಣಗೆರೆಯಲ್ಲಿ ಕಾಮಹದನ ಮಾಡಿ ಹೋಳಿ ಹಬ್ಬ ಆಚರಿಸಿದ್ದಾರೆ. ಪರಸ್ಪರ ಬಣ್ಣ ಎರಚಿ ರಂಗಿನ ಹಬ್ಬ ಆಚರಿಸಿದ್ದಾರೆ. ಹೋಳಿ ಹಿನ್ನಲೆಯಲ್ಲಿ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ರಾತ್ರಿ 12ರವರೆಗೆ ಮಾತ್ರ ಬಣ್ಣ ಆಡಲು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿತ್ತು.

ಇನ್ನು ಹಂಪಿಯಲ್ಲೂ ಜನರು ಹೋಳಿ ಹಬ್ಬ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ವಿದೇಶಿಯರೂ ಪಾಲ್ಗೊಂಡಿದ್ದು, ಬಣ್ಣ ಹಚ್ಚಿ ಪರಸ್ಪರ ಶುಭ ಕೋರಿದ್ದಾರೆ. ಅಂತೆಯೇ ರಾಯಚೂರು, ಶಿವಮೊಗ್ಗ ಸೇರಿದಂತೆ ಅನೇಕ ಕಡೆ ವಯಸ್ಸಿನ ಬೇಧವಿಲ್ಲದೆ ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಬಣ್ಣಗಳಲ್ಲಿ ಮಿಂದೇಳುತ್ತಿದ್ದಾರೆ. ಹೋಳಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲೆಡೆ ಬಿಗಿ ಭದ್ರತೆ ಹಾಕಲಾಗಿದೆ. ಪೋಲಾಸ್‌ ಕಣ್ಗಾವಲಿನಲ್ಲೇ ಹೋಳಿ ಹಬ್ಬ ಆಚರಣೆ ಮಾಡಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com