Pandya ಪ್ರದರ್ಶನದ ಬಗ್ಗೆ Kapil Dev ಅಸಮಾಧಾನ : ಮಾಜಿ ನಾಯಕ ಹೇಳಿದ್ದೇನು..?

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚಿಗೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರವಲ್ಲಿ ವಿಫಲರಾಗಿದ್ದರು. ಮಾಜಿ ನಾಯಕ ಕಪಿಲ್ ದೇವ್ ಹಾರ್ದಿಕ್ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ ನಾನು ಹಾರ್ದಿಕ್ ಅವರನ್ನು ಟೀಮ್ ಇಂಡಿಯಾದಲ್ಲಿ ಒಬ್ಬ ಬ್ಯಾಟ್ಸಮನ್ ಅಥವಾ ಬೌಲರ್ ರೂಪದಲ್ಲಿ ನೋಡಲು ಬಯಸುತ್ತೇನೆ. ಪಾಂಡ್ಯ ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸಿ ಸ್ವಲ್ಪ ಪರಿಶ್ರಮ ಪಡುವ ಅಗತ್ಯವಿದೆ. ಬ್ಯಾಟಿಂಗ್ ನಲ್ಲಿ ಕೊಂಚ ಸುಧಾರಣೆ ಕಂಡುಬಂದರೆ, ಬೌಲಿಂಗ್ ಮಾಡುವುದೂ ಅವರಿಗೆ ಸುಲಭವಾಗಲಿದೆ ‘ ಎಂದಿದ್ದಾರೆ.

3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ 119 ರನ್ ಹಾಗೂ 3 ವಿಕೆಟ್ ಪಡೆದಿದ್ದರು. ಏಕದಿನ ಸರಣಿಯಲ್ಲಿ 26 ರನ್ ಗಳಿಸಿ 4 ವಿಕೆಟ್ ಪಡೆದಿದ್ದರು. 3 ಪಂದ್ಯಗಳ ಟಿ20 ಸರಣಿಯಲ್ಲಿ 34 ರನ್ ಗಳಿಸಿ 3 ವಿಕೆಟ್ ಉರುಳಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com