ಹೊರಗೆ ಬಂದು ನಿನ್ನ ನೋಡ್ಕೋತೀನಿ : ಅಪ್ಪಂಗೇ ಕರೆ ಮಾಡಿ ಆವಾಜ್‌ ಹಾಕಿದ ನಲಪ್ಪಾಡ್‌

ಬೆಂಗಳೂರು : ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗಿರುವ ಶಾಸಕ ಹ್ಯಾರಿಸ್‌ ಪುತ್ರ ನಲಪ್ಪಾಡ್‌ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಇದೇ ವೇಳೆ ಜೈಲಿನಲ್ಲಿರುವ ನಲಪ್ಪಾಡ್‌ ತಂದೆ ಹ್ಯಾರಿಸ್‌ ಅವರಿಗೆ ಕರೆ ಮಾಡಿ ಆವಾಜ್‌ ಹಾಕಿದ್ದಾನೆ ಎಂದು ಜೈಲಿನ ಮೂಲಗಳು ಹೇಳಿವೆ.

ಜೈಲಿನಿಂದಲೇ ತಂದೆಗೆ ಕರೆ ಮಾಡಿರುವ ನಲಪ್ಪಾಡ್‌ ಜಾಮೀನು ಕೊಡಿಸಲು ನಿನ್ನಿಂದ ಆಗುತ್ತೋ ಇಲ್ಲವೋ ಹೇಳು. ನಿನ್ನಿಂದ ಸಾಧ್ಯವಾಗದಿದ್ದರೆ ಹೊರಗಡೆ ನಮ್ಮ ಹುಡುಗರು ಇದ್ದಾರೆ. ಅವರಿಗೆ ಹೇಳಿ ಜಾಮೀನು ಮಾಡಿಸಿಕೊಳ್ಳುತ್ತೇನೆ ಎಂದು ಕಿರುಚಾಡಿದ್ದಾನೆ. ಅಲ್ಲದೆ ನನ್ನನ್ನು ನೋಡೋಕು ನೀನು ಬರಲಿಲ್ಲ. ನಾನು ಹೊರಗೆ ಬಂದ ಮೇಲೆ ನಿನ್ನನ್ನು ನೋಡ್ತೋತೀನಿ ಎಂದು ತಂದೆಗೇ ಕ್ಲಾಸ್‌ ತೆಗೆದುಕೊಂಡಿರುವುದಾಗಿ ಪರಪ್ಪನ ಅಗ್ರಹಾರದ ಮೂಲಗಳು ಹೇಳಿವೆ.

Leave a Reply

Your email address will not be published.

Social Media Auto Publish Powered By : XYZScripts.com