WATCH : ಪಾಕ್ ಬಾಲಕನ ಅದ್ಭುತ Swing ಬೌಲಿಂಗ್ : ಮತ್ತೊಬ್ಬ ವಾಸಿಮ್ ಅಕ್ರಮ್ ಉಗಮ.?

ಜಾಗತಿಕ ಕ್ರಿಕೆಟ್ ಕ್ಷೇತ್ರಕ್ಕೆ ಪಾಕಿಸ್ತಾನ ತಂಡ ಹಲವು ಶ್ರೇಷ್ಟ ವೇಗದ ಬೌಲರುಗಳನ್ನು ನೀಡಿದೆ. ವಾಸಿಮ್ ಅಕ್ರಮ್, ವಕಾರ್ ಯೂನಿಸ್, ಇಮ್ರಾನ್ ಖಾನ್, ಶೋಯೆಬ್ ಅಖ್ತರ್ ಇವರೆಲ್ಲ ಬ್ಯಾಟ್ಸಮನ್ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದವರು.

ಭಾರತದಲ್ಲಿನ ಅನೇಕ ಯುವ ಕ್ರಿಕೆಟಿಗರು ಸಚಿನ್, ದ್ರಾವಿಡ್ ಅವರನ್ನು ತಮ್ಮ ರೋಲ್ ಮಾಡೆಲ್ ಆಗಿ ಪರಿಗಣಿಸುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಬಹುತೇಕ ಯುವ ಆಟಗಾರರು ವಾಸಿಮ್, ವಕಾರ್ ಅವರಂತೆ ವೇಗದ ಬೌಲರ್ ಆಗಬೇಕೆಂಬ ಕನಸು ಕಾಣುತ್ತಾರೆ.

ಇದೀಗ ಪಾಕ್ ಗಲ್ಲಿಯಲ್ಲಿ ಪುಟ್ಟ ಬಾಲಕನೊಬ್ಬ ಅದ್ಭುತ ಸ್ವಿಂಗ್ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತನ ಬೌಲಿಂಗ್ ಶೈಲಿಯೂ ವಾಸಿಮ್ ಅಕ್ರಮ್ ಅವರ ಶೈಲಿಯನ್ನೇ ಹೋಲುತ್ತದೆ. ಪಾಕ್ ಕ್ರಿಕೆಟ್ ನಲ್ಲಿ ಮತ್ತೊಬ್ಬ ವಾಸಿಮ್ ಅಕ್ರಮ್ ಹುಟ್ಟಿಕೊಂಡಿದ್ದಾನೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com