ವಿಶ್ವದ ಅತೀದೊಡ್ಡ ಸೋಲಾರ್‌ ಪಾರ್ಕ್‌ ಉದ್ಘಾಟನೆ ಮಾಡಿದ CM : 8ನೇ ಅದ್ಭುತ ಎಂದು ಬಣ್ಣನೆ

ತುಮಕೂರು : ಪ್ರಪಂಚದ ಅತೀದೊಡ್ಡ ಸೋಲಾರ್‌ ಪಾರ್ಕ್‌ ಇಂದು ಲೋಕಾರ್ಪಣೆಗೊಂಡಿದೆ. ತುಮಕೂರಿನ ಪಾವಗಡದ ನಗಲಮಡಿಕೆ ಬಳಿ ನಿರ್ಮಾಣವಾಗಿರುವ ಸೋಲಾರ್‌ ಪಾರ್ಕ್‌ನ್ನು ಸಿಎಂ ಸಿದ್ದರಾಮಯ್ಯ  ಉದ್ಘಾಟಿಸಿದ್ದಾರೆ.

ಬಳಿಕ ಮಾತನಾಡಿದ ಸಿಎಂ, ಪಾವಗಡದ ಸೋಲಾರ್‌ ಪಾರ್ಕ್‌ ಪ್ರಪಂಚದ ಎಂಟನೇ ಅದ್ಭುತ. ಇದಕ್ಕಾಗಿ 13ಸಾವಿರ ಎಕರೆ ಜಾಗವನ್ನು ರೈತರಿಂದ ಗುತ್ತಿಗೆಗೆ ಪಡೆಯಲಾಗಿದೆ. ಪ್ರತೀ ಎಕರೆಗೆ 21 ಸಾವಿರ ನೀಡಿದ್ದು, 30 ವರ್ಷ ಗುತ್ತಿಗೆ ಪಡೆಯಲಾಗಿದೆ. ಇದರಿಂದಾಗಿ ರೈತರು ಮೂಲ ಮಾಲೀಕರಾಗಿಯೇ ಉಳಿಯುತ್ತಾರೆ. ಈ ಕೆಲಸಕ್ಕೆ ಸಹಕಾರ ನೀಡಿದ ಎಲ್ಲಾ ರೈತರಿಗೂ ಈ ಮೂಲಕ ಧನ್ಯವಾದ ಹೇಳುತ್ತೇನೆ. ಪಾವಗಡದಲ್ಲಿ ಇನ್ನು ಉದ್ಯೋಗ, ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ಜಮೀನಿನ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ಸರ್ಕಾರಕ್ಕೆ ದೊಡ್ಡ ಗೌರವ ಸಂದಿರುವುದಾಗಿ ಹೇಳಿದ್ದಾರೆ .

Leave a Reply

Your email address will not be published.

Social Media Auto Publish Powered By : XYZScripts.com