Dhoni ಬಗ್ಗೆ ಸೌರವ್ ಮನದಾಳದ ಮಾತು : ಆತ್ಮಕಥೆಯಲ್ಲಿ ದಾದಾ ಹೇಳಿದ್ದೇನು..?

ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ಶ್ರೇಷ್ಟ ನಾಯಕರಲ್ಲಿ ಪರಿಗಣಿಸಲ್ಪಡುತ್ತಾರೆ. ಇಬ್ಬರೂ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ.

ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಆತ್ಮಕಥೆ ‘ ಎ ಸೆಂಚುರಿ ಇಸ್ ನಾಟ್ ಇನಫ್ ‘ ಪುಸ್ತಕದಲ್ಲಿ ಧೋನಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ ಒತ್ತಡದ ಸಂದರ್ಭಗಳಲ್ಲಿ ಸ್ಥಿರತೆಯಿಂದ ಇರುವವರು, ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯವುಳ್ಳ ಆಟಗಾರರಿಗಾಗಿ ಹಲವು ವರ್ಷಗಳಿಂದ ಹುಡುಕಾಡತ್ತಿದ್ದೆ. 2004 ರಲ್ಲಿ ನನ್ನ ಗಮನ ಸೆಳೆದ ಧೋನಿ ನಿಸ್ಸಂಶಯವಾಗಿ ಆ ಸಾಲಿಗೆ ಸೇರುತ್ತಾರೆ ‘

‘ 2003 ರ ವಿಶ್ವಕಪ್ ವೇಳೆಯಲ್ಲಿ ನಾನು ನಾಯಕನಾಗಿದ್ದ ಭಾರತ ತಂಡದಲ್ಲಿ ಧೋನಿ ಇರಬೇಕಿತ್ತು. ನಾವು ಫೈನಲ್ ಆಡುತ್ತಿದ್ದ ಸಮಯದಲ್ಲಿ ಧೋನಿ ಭಾರತೀಯ ರೇಲ್ವೇ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು. ಅನ್ ಬಿಲೀವೆಬಲ್ ‘ ಎಂದು ಬರೆದಿದ್ದಾರೆ.

2003ರ ವಿಶ್ವಕಪ್ ನಲ್ಲಿ ಫೈನಲ್ ತಲುಪಿದ್ದ ಭಾರತ ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com