ಪ್ರಧಾನಿ ಮೋದಿ ಮಹಾ ಸುಳ್ಳುಗಾರ, ಬೇಜವಾಬ್ದಾರಿ ಮನುಷ್ಯ : ಸಿದ್ದರಾಮಯ್ಯ

ಬಾಗಲಕೋಟೆ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಶಿಲಾನ್ಯಾಸವನ್ನು ನೆರವೇರಿಸಿದ ಸಿದ್ದರಾಮಯ್ಯ ‘ ವೇದಿಕೆ ಮೇಲೆ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ‘ ಬಿಜೆಪಿ ಮುಷ್ಟಿ ಅಕ್ಕಿ ಅಭಿಯಾನ ಒಂದು ಡ್ರಾಮಾ, ಈ ರಾಜ್ಯದ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದಾರೆ.

ಏನೇ ನಾಟಕ ಮಾಡಿದರು ಅರ್ಥ ಮಾಡಿಕೊಳ್ಳುವ ಶಕ್ತಿ ಜನರಿಗಿದೆ. ಕರ್ನಾಟಕದ ಜನರ ದಾರಿ ತಪ್ಪಿಸೋಕೆ ಆಗೋದಿಲ್ಲ. ಅವರು ಮುಷ್ಟಿ ಅಕ್ಕಿ ತೆಗೆದುಕೊಳ್ಳೋರು ಏನ್ರಿ ಇದು ನಾಟಕ. ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ ಶೂರನೂ ಅಲ್ಲ ‘ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದರು.

ಬಿಎಸ್ ವೈ ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ. ಪ್ರಧಾನಿ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಸುಳ್ಳು ಹೇಳಲು ಬಂದಿದ್ದಾರೆ. ನರೇಂದ್ರ ಮೋದಿ ಮಹಾಸುಳ್ಳುಗಾರ, ಬೇಜವಾಬ್ದಾರಿ ಮನುಷ್ಯ. ಇಂತಹ ಸುಳ್ಳುಗಾರನನ್ನು ಎಲ್ಲೂ ನೋಡಲಿಲ್ಲ. ಈಗ ನನ್ನ ಬಗ್ಗೆ ಸೀದಾರುಪಯ್ಯಾ ಎಂದು ಹೇಳುತ್ತಿದ್ದಾರೆ ‘ ಎಂದು ಸಿಎಂ ಮೋದಿಗೆ ತಿರುಗೇಟು ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com