ಅನಿವಾಸಿ ಭಾರತೀಯರು ಲೋಫರ್‌ಗಳಂತೆ….ಸಚಿವ ಖಾದರ್‌ ಹೀಗಂದಿದ್ಯಾಕೆ ?

ಮಂಗಳೂರು : ಟೀಕೆ ಮಾಡುವ ಭರದಲ್ಲಿ ಸಚಿವ ಯು.ಟಿ ಖಾದರ್ ಯಡವಟ್ಟು ಮಾಡಿಕೊಂಡಿದ್ದಾರೆ. ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಅನಿವಾಸಿ ಭಾರತೀಯರನ್ನು ಲೋಫರ್‌ ಎಂದಿದ್ದು, ಇದಕ್ಕೆ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ.

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮಧ್ಯೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಪುತ್ತೂರಿನಲ್ಲಿ ನಡೆದ ಮಸೀದಿಯ ಉರುಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರ್, ನಾನು ಹಿಂದೂಗಳ ಕಾರ್ಯಕ್ರಮಕ್ಕೆ ಹೋದಾಗ ಕೆಲವರು ವಿದೇಶದಲ್ಲಿ ಕುಳಿತು ಸೋಶಿಯಲ್‌ ಮೀಡಿಯಾದಲ್ಲೇ ವಿರೋಧ ಮಾಡುತ್ತಾರೆ. ಭಾರತದಲ್ಲಿರಲಾಗದೆ ನಾಟಕ ಮಾಡಿ ವಿದೇಶಕ್ಕೆ ಹೋಗುತ್ತಾರೆ. ನಾನೊಬ್ಬ ಜನಪ್ರತಿನಿಧಿಯಾಗಿ ಎಲ್ಲಾ ಧರ್ಮದವರ ಕಾರ್ಯಕ್ರಮಕ್ಕೆ ಹೋಗುವುದು ನನ್ನ ಧರ್ಮ. ಆ ಲೋಫರ್‌ಗಳಿಂದ ನಾನು ಕಲಿಯಬೇಕಾಗಿಲ್ಲ ಎಂದು ಕಿಡಿ ಕಾರಿದ್ದಾರೆ.

ಈ ಹೇಳಿಕೆ ಎಲ್ಲೆಡೆ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಪಕ್ಷದ ಕೆಲ ಕಾರ್ಯಕರ್ತರೇ ಖಾದರ್ ಅವರ ಬ್ಯಾನರ್‌ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com