BJP ಯದ್ದು ಜನಸುರಕ್ಷಾ ಯಾತ್ರೆಯಲ್ಲ, ಅಧಿಕಾರ ಸುರಕ್ಷಾ ಯಾತ್ರೆ : ಮುತಾಲಿಕ್‌ ಕಿಡಿ

ಮಂಗಳೂರು : ಬಿಜೆಪಿಯ ಮಂಗಳೂರು ಚಲೋ ಜನ ಸುರಕ್ಷಾ ಯಾತ್ರೆ ವಿರುದ್ದ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್‌ ಮುತಾಲಿಕ್‌ ಕಿಡಿ ಕಾರಿದ್ದಾರೆ. ಬಿಜೆಪಿಯದ್ದು ಜನಸುರಕ್ಷಾ ಯಾತ್ರೆ ಅಲ್ಲ, ಅದು ಅಧಿಕಾರ ಸುರಕ್ಷಾ ಯಾತ್ರೆ. ಇದರಲ್ಲಿ ಹಿಂದುಗಳ, ಕಾರ್ಯಕರ್ತರ ಮತ್ತು ಸಂಘಟನೆಗಳ ಬಗ್ಗೆ ಕಾಳಜಿ ಇಲ್ಲ. ಇವರು ಯಾತ್ರೆಯನ್ನು ಭಟ್ಕಳದಿಂದಲೇ ಪ್ರಾರಂಭಿಸಬೇಕಿತ್ತು ಎಂದಿದ್ದಾರೆ.
1997ರಲ್ಲೇ ಭಟ್ಕಳದಲ್ಲಿ 21 ಮಂದಿ ಹಿಂದುಗಳ ಕೊಲೆಯಾಗಿತ್ತು. ಇದೇ ಬಿಜೆಪಿ ವಿರೋಧ ಪಕ್ಷದಲ್ಲಿದ್ದ ಸಮಯದಲ್ಲಿ ಜಗನ್ನಾಥ ಶೆಟ್ಟಿ ಆಯೋಗ ರಚನೆಯಾಗಿತ್ತು. ಅಲ್ಲಿನ ಬಿಜೆಪಿ ತಾಲೂಕು ಅಧ್ಯಕ್ಷ ತಿಮ್ಮಪ್ಪ ಕೊಲೆ ಆರೋಪಿಗಳು ಇನ್ನೂ ಸಿಕ್ಕಿಲ್ಲ. ಆಗ ಆರ್.ಅಶೋಕ್ ಮತ್ತು ವಿ.ಎಸ್.ಆಚಾರ್ಯ ಗೃಹ ಸಚಿವರಾಗಿದ್ರು. ಆಗ ಜಗನ್ನಾಥ ಶೆಟ್ಟಿ ಆಯೋಗದ ವರದಿ ಜಾರಿಗೆ ತನ್ನಿ ಎಂದರೂ ಕ್ರಮ ಕೈಗೊಂಡಿಲ್ಲ. ಇಂಥವ್ರು ಇದೀಗ ಸುರಕ್ಷೆ ಅಂತಿದ್ದಾರೆ. ಅಧಿಕಾರದ ಸುರಕ್ಷತೆಗಾಗಿ ಹಿಂದೂ ಸಂಘಟನೆಗಳ ಮೇಲೆ ಸವಾರಿ ಮಾಡ್ತಿದಾರೆ.
ಕೋರ್ಟಿಗೆ ಅಲೆದಾಡ್ತಿರೋ ಕಾರ್ಯಕರ್ತರತ್ತ ಇವ್ರು ಗಮನ ಹರಿಸ್ತಿಲ್ಲ. ಇವರ ಈ ಸುರಕ್ಷತಾ ಯಾತ್ರೆ ಡೋಂಗಿ ಎನ್ನುವುದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.