ಮೂರು ಕಾಸಿನ ಕಿಮ್ಮತ್ತಿಲ್ಲದ ಪ್ರಕಾಶ್ ರೈ ಮರ್ಯಾದೆಗೆ 1 ರೂ ಹೆಚ್ಚೇ : ಪ್ರತಾಪ್‌ ಸಿಂಹ ವ್ಯಂಗ್ಯ

ಮೈಸೂರು : 1 ರೂ ಮಾನನಷ್ಟ ಮೊಕದ್ದಮೆ ಹೂಡಿರುವ ಪ್ರಕಾಶ್‌ ರೈ ವಿರುದ್ಧ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ. ನನ್ನ ವಿರುದ್ದ ಪ್ರಕಾಶ್ ರೈ 1 ರೂ ಮಾನನಷ್ಟ ಮೊಕದ್ದಮೆ ಹೂಡಿ ಅವರ ಮರ್ಯಾದೆಯ ಮೌಲ್ಯ ಏನು ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.

ಅವರಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಅವರಿಗಿರುವ ಮಾನ ಮರ್ಯಾದೆಗೆ ಒಂದೂ ರೂಪಾಯಿ ಸಹ ಹೆಚ್ಚೇ. ಆದರೂ ಪರವಾಗಿಲ್ಲ, ರೈಗೆ ಮಾನ ಮರ್ಯಾದೆಗೆ 1ರೂಪಾಯಿ ಮೌಲ್ಯವಿದೆ ಎಂದು ತಿಳಿದು ಸಂತೋಷವಾಯಿತು ಎಂದಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರತಾಪ್‌ ಸಿಂಹ ನಾನು ಇಲ್ಲಿಲ್ಲದ ವೇಳೆ ದೆಹಲಿಯಿಂದ ಪ್ರಕಾಶ್‌ ರಾಜ್‌ ಹೆಸರಿನಲ್ಲಿ ನೋಟಿಸ್‌ ಬಂದಿತ್ತು. ನನಗೆ ಅನುಮಾನ ಬಂದು ಪ್ರಕಾಶ್‌ ರೈ ಅಥವಾ ಪ್ರಕಾಶ್ ರಾಜ್‌  ಯಾವುದು ಎಂದು ಸ್ಪಷ್ಟಪಡಿಸುವಂತೆ ಹೇಳಿದ್ದೆ. ಸಿನಿಮಾದಲ್ಲಿ ಹೆಸರು ಬದಲಿಸುವಂತೆ ನಿಜ ಜೀವನದಲ್ಲೂ ಊರಿಗೊಂದು ಹೆಸರು ಇಟ್ಕೊಂಡಿದ್ದಾರೆ. ಅದಕ್ಕೇ ಇಲ್ಲಿಗೆ ಬಂದು ಮಾನನಷ್ಟ ಮೊಕದ್ದಮೆ ಹಾಕಿರುವುದಾಗಿ ಹೇಳಿದ್ದಾರೆ.

ನಾನು ಸಿಎಂ ಜಿಲ್ಲೆಯಲ್ಲೇ ಸ್ಪರ್ಧಿಸಿ ಸಂಸದನಾಗಿದ್ದೇನೆ. ನನ್ನ ಯೋಗ್ಯತೆ ಏನು ಎಂದಿು ಜನರಿಗೆ ಗೊತ್ತು. ಅವರಿಗೆ ಯೋಗ್ಯತೆ ಇದ್ದರೆ ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಲ್ಲಿ ನಿಂತು ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com