ಕ್ಯಾಪ್ಟನ್ ಕೊಹ್ಲಿಗೆ Pak ಕ್ರಿಕೆಟ್ ಅಭಿಮಾನಿಯ ವಿನಂತಿ : ಏನದು..?

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂತಿರುಗಿದ್ದಾರೆ. ಮಾರ್ಚ್ 6 ರಿಂದ ಆರಂಭವಾಗಲಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಭಾಗವಹಿಸಲಿರುವ ನಿದಾಹಾಸ್ ಟ್ರೋಫಿ ತ್ರಿಕೋನ ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಸದ್ಯ ವಿಶ್ವದ ನಂ.1 ಏಕದಿನ ಬ್ಯಾಟ್ಸಮನ್ ಆಗಿರುವ ವಿರಾಟ್ ಕೊಹ್ಲಿಗೆ ನೆರೆ ರಾಷ್ಟ್ರ ಪಾಕಿಸ್ತಾನದ ಅಭಿಮಾನಿಯೊಬ್ಬರು ವಿನಂತಿ ಮಾಡಿಕೊಂಡಿದ್ದಾರೆ. ಅಭಿಮಾನಿಯೊಬ್ಬ PSL ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡುವಂತೆ ವಿರಾಟ್ ಕೊಹ್ಲಿಯನ್ನು ಕೇಳಿಕೊಂಡಿದ್ದಾನೆ.

PSL ಟೂರ್ನಮೆಂಟಿನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಅಭಿಮಾನಿ ಫಲಕವೊಂದನ್ನು ಹಿಡಿದುಕೊಂಡಿದ್ದು, ಅದರಲ್ಲಿ ‘ ಕೊಹ್ಲಿಯನ್ನು ಪಾಕ್ ಸೂಪರ್ ಲೀಗ್ ನಲ್ಲಿ ನೋಡಲು ಬಯಸುತ್ತೇವೆ ‘ ಎಂದು ಬರೆಯಲಾಗಿದೆ.

Image result for virat kohli psl

Leave a Reply

Your email address will not be published.

Social Media Auto Publish Powered By : XYZScripts.com