ಮುಂಬೈ T-20 ಲೀಗ್‌ನಲ್ಲಿ ಆಡಲ್ವಂತ್‌ ಅರ್ಜುನ್‌ ತೆಂಡೂಲ್ಕರ್‌….ಕಾರಣವೇನು ?

ಕ್ರಿಕೆಟ್‌ ದೇವರು, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಟಿ-20 ಲೀಗ್‌ನಿಂದ ಹಿಂದೆ ಸರಿದಿದ್ದಾರೆ.

ಹೌದು ಸಚಿನ್‌ ಅವರ ಪುತ್ರ ಅರ್ಜುನ್‌ ತಮ್ಮ ಬೌಲಿಂಗ್‌ ಆ್ಯಕ್ಷನ್‌ ಬದಲಿಸಿಕೊಳ್ಳುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಕಠಿಣ ಅಭ್ಯಾಸ ಮಾಡುತ್ತಿರುವುದರಿಂದ ಲೀಗ್‌ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ಮಾರ್ಚ್‌ 11ರಿಂದ 21ರವರೆಗೆ ಮುಂಬೈ ಟಿ-20 ಲೀಗ್‌ ನಡೆಯಲಿದೆ. ಈ ಸರಣಿಗೆ ಸಚಿನ್‌ ಬ್ರಾಂಡ್ ಅಂಬಾಸಿಡರ್‌ ಆಗಿದ್ದಾರೆ. ಅಲ್ಲದೆ ಅರ್ಜುನ್‌ ಕಳೆದೆರಡು ವರ್ಷದಿಂದ ಹೆಚ್ಚು ಬೆಳೆದಿದ್ದು, ಈ ಬೆಳವಣಿಗೆಯಿಂದಾಗಿಯೇ ಎರಡು ಬಾರಿ ಮೂಳೆ ಮುರಿತ ಸಹ ಉಂಟಾಗಿತ್ತು. ಈಗ ಬೌಲಿಂಗ್‌ ಆ್ಯಕ್ಷನ್‌ ಬದಲಿಸಿಕೊಳ್ಳಲು ಕಠಿಣ ಅಭ್ಯಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಟಿ-20ಯಲ್ಲಿ ಭಾಗವಹಿಸಿದರೆ ಅಭ್ಯಾಸ ಅರ್ಧಕ್ಕೇ ನಿಲ್ಲುವ ಸಾಧ್ಯತೆ ಇದೆ ಎಂಬುದು ಅರ್ಜುನ್ ಅವರ ಕೋಚ್‌  ಅತುಲ್‌ ಗಾಯಕ್ವಾಡ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸ ಆ್ಯಕ್ಷನ್‌ನಲ್ಲಿ ಬೌಲಿಂಗ್ ಮಾಡಬೇಕೋ ಅಥವಾ ಹಳೆಯದ್ದನ್ನೇ ಆಡಬೇಕೋ ಎಂಬ ಗೊಂದಲ ಉಂಟಾಗುವ ಹಿನ್ನೆಲೆಯಲ್ಲಿ ಸರಣಿಯಲ್ಲಿ ಆಡುವುದೇ ಬೇಡ ಎಂದು ಕೋಚ್‌ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com