ನನ್ನ ಹೃದಯದಲ್ಲಿರುವುದು ನಾಡಿನ ತಾಯಂದಿರ ಸಮಸ್ಯೆ, ನಿರುದ್ಯೋಗದ ಸಮಸ್ಯೆ : HDK

ಚಿತ್ರದುರ್ಗ : ಕುಮಾರ ಪರ್ವ ಯಾತ್ರೆ ಇಂದು ಚಿತ್ರದುರ್ಗಕ್ಕೆ ತಲುಪಿದ್ದು, ಈ ಯಾತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದಾರೆ. ನನ್ನ ಹೃದಯದಲ್ಲಿ ಇರುವಂತದ್ದು ನನ್ನ ಆರೋಗ್ಯಕ್ಕಿಂತ ಮುಖ್ಯವಾಗಿ ನಾಡಿನ ತಾಯಂದಿರ ಸಮಸ್ಯೆ, ಯವಕರ ನಿರುದ್ಯೋಗದ ಸಮಸ್ಯೆ, ರೈತರ ನೀರಾವರಿ ಸಮಸ್ಯೆ. ಅದೇ ನನಗೆ ಮುಖ್ಯ. ಬಿತ್ತಿದ ಬೀಜ ಮೊಳಕೆ ಒಡೆಯದೆ ಕೋಟ್ಯಾಂತರ ರೂ ರೈತರ ಹಣ ನಷ್ಟವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಸಾಲಮನ್ನಾ ಮಾಡಿ ಎಂದು ರಾಜ್ಯದ ಜನರು ಹೇಳುತ್ತಿದ್ದಾರೆ.ಜೂನ್ 28 ರಂದು ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಯೋಜನೆ ಸಿ.ಎಂ ಜಾರಿಗೆ ತಂದಿದ್ದಾರೆ. ಮಾರ್ಚ್ 1 ಆಗಿದ್ದರು ಕೂಡ ಹಣ ಬಂದಿಲ್ಲ ಎಂದು ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮರಳು ದಂಧೆ ಮಾಡಿಲ್ಲ, ಹಣ ಮಾಡಿಲ್ಲ, ನಿಮ್ಮ ಸೇವಕನಾಗಿ ಕೆಲಸ ಮಾಡ್ತಿದ್ದೇನೆ. ಮುಂಬರುವ ಮುಖ್ಯಮಂತ್ರಿಗಳು ಸಾಲಮನ್ನಾ ಮಾಡಬೇಕೆ ಹೊರತು ಈಗಿನ ಮುಖ್ಯಮಂತ್ರಿಯಿಂದ ಸಾಧ್ಯವಿಲ್ಲ. ಸಾಲಮನ್ನಾ ಮಾಡಲು ನಾನು ಯಾವುದೇ ರೀತಿಯ ಷರತ್ತು ಹಾಕುವುದಿಲ್ಲ. ಗಾಂಧಿ ಕನಸು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದ್ದೇನೆ. ಮೋದಿಯವರು ಯಡಿಯೂರಪ್ಪ ನವರಿಗೆ ರೈತ ಬಂಧು ಎಂಬ ಬಿರುದು ನೀಡಿದ್ದಾರೆ, ಯಡಿಯೂರಪ್ಪ ಅವರು ರೈತರಿಗೆ ಒಂದೇ ಒಂದು ಕೆಲಸ ಮಾಡಿಲ್ಲ. 51 ಸಾವಿರ ಕೋಟಿ ಹಣ ಸಂಪೂರ್ಣ ಸಾಲಮನ್ನಾ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಒಳಗೆ ಮಾಡುತ್ತೇನೆ. ಅಧಿಕಾರ ಕೊಡುವವರು ಸಿದ್ದರಾಮಯ್ಯ ಅಲ್ಲ ಪುಣ್ಯಾತ್ಮರು ರಾಜ್ಯದ ಜನರು. ನಾನು ಮುಖ್ಯಮಂತ್ರಿ ಆದರೆ ನಾನಲ್ಲ ರಾಜ್ಯದ ಜನರು ಮುಖ್ಯಮಂತ್ರಿಗಳು ಎಂದಿದ್ದಾರೆ.

ಹೃದಯ ಸಮಸ್ಯೆ ಇದ್ದರು ಇಸ್ರೇಲ್ ಗೆ ಹೋಗಿ ಅಲ್ಲಿನ ರೈತರ ಸ್ಥಿತಿಗಳಗಳ ಅಧ್ಯಯನ ಮಾಡಿಕೊಂಡು ಬಂದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಸವಾಲ್ ಸ್ವೀಕರಿಸಿ ನಿಮ್ಮ ಮುಂದೆ ಬಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ಪೌಷ್ಟಿಕ ಆಹಾರ ಸಮಸ್ಯೆ ಇವತ್ತಿಗೂ ಇದೆ. ಮಾತೃ ಪೂರ್ಣ ಯೋಜನೆ ನೀಡಿದ್ದೇನೆಂದು ನಿಮ್ಮ ಮುಂದೆ ಮತ ಕೇಳಲು ಬಂದಿದ್ದಾರೆ. 5-10 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಯೋಜನೆ ಜಾರಿಗೆ ತಂದು ನಿರುದ್ಯೋಗ ಸಮಸ್ಯೆ ಹೋಗಲಾಡಿಸುವೆ. ಗರ್ಭಿಣಿ ಮಹಿಳೆಯರಿಗೆ, ವೃದ್ದರಿಗೆ ವಿಶೇಷ ಯೋಜನೆ ಜಾರಿಗೆ ತರುತ್ತೇನೆ. ಹಿರಿಯೂರಿನ ಅಭ್ಯರ್ಥಿ ಯಶೋಧರ ಬಳಿ ಹಣ ಇಲ್ಲದೆ ಇದ್ದರು ಪ್ರಾಮಾಣಿಕತೆಯಲ್ಲಿ ಶ್ರೀಮಂತ ಇದ್ದಾನೆ. ಯಶೋಧರ ಅವರಿಗೆ ನಿಮ್ಮ ಮತ ನೀಡಿ ಎಂದು ಜನರಲ್ಲಿ ಎಚ್‌ಡಿಕೆ ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com