ಶ್ರೀದೇವಿ ನಿಧನಕ್ಕೇ ಹೀಗಾದ್ರೆ, ಸನ್ನಿ ಮೃತಪಟ್ಟರೆ ಏನ್‌ ಮಾಡ್ತೀರಿ ಅಂದ್ಬಿಟ್ರು ಈ ನಟಿ….?!!

ಚೆನ್ನೈ : ಇತ್ತೀಚೆಗಷ್ಟೇ ಕಾಸ್ಟಿಂಗ್‌ ಕೌಚ್‌, ಹಿರಿಯ ಕಲಾವಿದರು ಬಗ್ಗೆ ಆರೋಪ, ಕಮಲ್‌ ಹಾಸನ್‌ ವಿರುದ್ಧದ ಟ್ವೀಟ್‌  ಸೇರಿದಂತೆ ಅನೇಕ ವಿಚಾರಗಳಲ್ಲಿ ಸುದ್ದಿ ಮಾಡಿದ್ದ ನಟಿ ಕಸ್ತೂರಿ ಶಂಕರ್‌ ಈಗ ಮತ್ತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಸುದ್ದಿಯಲ್ಲಿದ್ದಾರೆ.

ಶ್ರೀದೇವಿ ನಿಧನದ ಕುರಿತು ಎಲ್ಲಾ ಮಾಧ್ಯಮಗಳು ನೇರಪ್ರಸಾರ ಮಾಡಿದ್ದವು. ಅಲ್ಲದೆ, ಅವರ ಫೋಟೋಗಳು, ಹಾಡುಗಳು, ಸಿನಿಮಾದ ದೃಶ್ಯಗಳನ್ನು ಬಿತ್ತರಿಸಿದ್ದವು. ಈ ಕುರಿತು ಕಸ್ತೂರಿ ಪ್ರತಿಕ್ರಿಯಿಸಿದ್ದು, ಶ್ರೀದೇವಿ ಮೃತಪಟ್ಟಿದ್ದಕ್ಕೆ ಎಲ್ಲಾ ವಾಹಿನಿಗಳು ಅವರಿಗೆ ಸಂಬಂಧಿಸಿದ ಹಾಡುಗಳು, ದೃಶ್ಯಗಳನ್ನು ಪ್ರಸಾರ ಮಾಡುತ್ತಿವೆ. ಒಂದು ವೇಳೆ ಸನ್ನಿ ಲಿಯೋನ್‌ ಮೃತಪಟ್ಟರೆ ಆಗ ಏನು ಮಾಡುತ್ತೀರಿ ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ಸನ್ನಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಎಚ್ಚೆತ್ತುಕೊಂಡ ಕಸ್ತೂರಿ, ಫೇಸ್‌ಬುಕ್‌ನಲ್ಲಿ ಬಂದ ಜೋಕ್‌ ಒಂದನ್ನು ನಾನು ಹಂಚಿಕೊಂಡಿದ್ದೆ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com