ನನಸಾಯ್ತು ದಶಕಗಳ ಕನಸು : ಕೊನೆಗೂ ಕನ್ನಡಿಗನಿಗೆ ಒಲಿದ ಬೆಳಗಾವಿ ಮೇಯರ್‌ ಪಟ್ಟ

ಬೆಳಗಾವಿ : ಬೆಳಗಾವಿ ‌ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಪಾಲಿಕೆಯ ಮೇಯರ್‌ ಹುದ್ದೆ ಕನ್ನಡಿಗನ ಪಾಲಾಗಿದೆ. ಬಸವರಾಜ್‌ ಚಿಕ್ಕಲದಿನ್ನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಕನ್ನಡಿಗರ ದಶಕದ ಕನಸು ನನಸಾಗಿದೆ.

ಬಸವರಾಜ್, ಪಾಲಿಕೆಯಲ್ಲಿ ಐದನೇ ಕನ್ನಡದ ಮೇಯರ್‌ ಆಗಿದ್ದು ಈ ಕುರಿತು ಚುನಾವಣಾ ಅಧಿಕಾರಿ ಮೇಘಣ್ಣವರ್ ಅಧಿಕೃತ ಘೋಷಣೆ ಮಾಡಿದ್ದಾರೆ. ಮೇಯರ್‌ ಸ್ಥಾನ ಕನ್ನಡಿಗನಿಗೆ ಸಿಕ್ಕ ಹಿನ್ನೆಲೆಯಲ್ಲಿ ಕನ್ನಡ ಪರ ಪಾಲಿಕೆ ಸದಸ್ಯರಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಹುದ್ದೆ ಎಸ್ಟಿ ಸಮುದಾಯಕ್ಕೆ ಮೀಸಲಾಗಿತ್ತು. ಎಸ್ಟಿ ಸಮುದಾಯದ ಸದಸ್ಯರು ಕೇವಲ ಕನ್ನಡ ಬಣದಲ್ಲಿ ಮಾತ್ರ ಇದ್ದರು. ಈ ಹಿನ್ನೆಲೆಯಲ್ಲಿ ಬಸವರಾಜ್‌ ಆಯ್ಕೆಯಾಗಿದ್ದು,  ಬಹುಮತವಿದ್ದರೂ ಪಾಲಿಕೆ ಅಧಿಕಾರ ಹಿಡಿಯುವಲ್ಲಿ ಎಂಇಎಸ್ ವಿಫಲವಾಗಿದೆ.
ಆದರೆ ಬೆಳಗಾವಿ ಉಪಮೇಯರ್‌ ಸ್ಥಾನ ಮಾತ್ರ ಎಂಇಎಸ್‌ ಪಾಲಾಗಿದ್ದು, ಎಂಇಎಸ್‌ ಮಧುಶ್ರೀ ಪೂಜಾರಿ ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com