ಇದನ್ನು ಅಹಂಕಾರದಿಂದ ಹೇಳ್ತಿಲ್ಲ, ಆದ್ರೆ ಈ ಬಾರಿ ಸರ್ಕಾರ ರಚನೆ ಮಾಡೇ ಮಾಡ್ತೀವಿ : HDD

ಬೆಂಗಳೂರು : ಬಿಎಸ್‌ಪಿ ಮತ್ತು ಎನ್‌ಸಿಪಿ ಜತೆ ಮೈತ್ರಿ ಸಾಧಿಸಿದ ಬೆನ್ನಲ್ಲೇ ಜೆಡಿಎಸ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ತೆರೆಮರೆ ಯಲ್ಲಿ ಕಸರತ್ತು ನಡೆಸಿದೆ.

ಈ ಕುರಿತು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಖಚಿತ ನಿರ್ಧಾರಕ್ಕೆ ಬಂದಿಲ್ಲ. ಆದರೆ ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಎಸ್‌ಪಿ  ಜೊತೆ ಇರುತ್ತೇನೆ. ಇಷ್ಟು ದಿನದ ಹೋರಾಟದ ಫಲವಾಗಿ ಈ ಬಾರಿ ಸರ್ಕಾರ ರಚನೆ ಮಾಡಿಯೇ ಸಿದ್ಧ ಎಂದಿದ್ದಾರೆ.

ಅಲ್ಲದೆ ಈ ಮಾತನ್ನು ನಾನು ಅಹಂನಿಂದ ಹೇಳುತ್ತಿಲ್ಲ ಎಂದಿರುವ ಅವರು, ದೈವ ಬಲದ ಪರೀಕ್ಷೆಯಿದು ಎಂದಿದ್ದಾರೆ. ಬಿಎಸ್ಪಿ, ಸಿಪಿಐಎಂ,ಎನ್ಸಿಪಿ ಜೊತೆ ಈಗಾಗಲೇ ಹೊಂದಾಣಿಕೆ ಮಾಡಿ ಕೊಳ್ಳಲಾಗಿದೆ, ಪ್ರಾದೇಶಿಕ ಪಕ್ಷ ಗಟ್ಟಿ ಯಾಗಬೇಕು,ನನ್ನ ಮಗನನ್ನು ಸಿಎಂ ಮಾಡೋದಷ್ಟೇ ನನ್ನ ಉದ್ದೇಶ ಅಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com