ಜೈಲಿನ ಅಕ್ರಮದ ಬಗ್ಗೆ ವರದಿ ನೀಡಿದ್ದ ರೂಪಾ ವಿರುದ್ಧವೇ ತನಿಖೆಗೆ ಆದೇಶ !

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದ್ದ ಅಕ್ರಮದ ಕುರಿತು ಬೆಳಕು ಚೆಲ್ಲಿದ್ದ ಐಪಿಎಸ್‌ ಅಧಿಕಾರಿ ರೂಪಾ ಅವರ ವಿರುದ್ಧವೇ ತನಿಖೆ ನಡೆಸಲು ಆದೇಶಿಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಶಿಕಲಾಗೆ ಜೈಲಿನಲ್ಲಿ ಐಶಾರಾಮಿ ವ್ಯವಸ್ಥೆ ಮಾಡಲು 2 ಕೋಟಿ ಲಂಚ ಪಡೆದಿದ್ದಾರೆ ಎಂದು ರೂಪಾ ಕೆಲ ತಿಂಗಳ ಹಿಂದೆ  ಅಂದಿನ ಡಿಜಿಪಿಯಾಗಿದ್ದ ಸತ್ಯನಾರಾಯಣರಾವ್‌ ವಿರುದ್ಧ ವರದಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮಾಡುವಂತೆ ಸರ್ಕಾರ ಆದೇಶಿಸಿತ್ತು. ಅದರಂತೆ ತನಿಖೆಯೂ ನಡೆದಿದ್ದು, ಈಗ ತನಿಖಾ ವರದಿಯನ್ನು ಅಂಗೀಕರಿಸಲಾಗಿತದ್ದು. ರೂಪಾ ಹಾಗೂ ಸತ್ಯನಾರಾಯಣ ಅವರ ವಿರುದ್ದ ತನಿಖೆಗೆ ಸರ್ಕಾರ ಆದೇಶಿಸಿದೆ. ಜೊತೆಗೆ ಪರಪ್ಪನ ಅಗ್ರಹಾರ ಜೈಲು ಸೂಪರಿಂಟೆಡೆಂಟ್‌ ಆಗಿದ್ದ ಕೃಷ್ಣ ಕುಮಾರ್‌, ಡೆಪ್ಯುಟಿ ಸೂಪರಿಂಟೆಂಡೆಂಟ್ ಅನಿತಾ ವಿರುದ್ಧವೂ ತನಿಖೆ ನಡೆಸುವಂತೆ ಆದೇಶಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com