ಹಿಂದಿ ಹೇರಿಕೆ ವಿರುದ್ಧದ ಅಭಿಯಾನಕ್ಕೆ ಜಯ : ಇನ್ಮುಂದೆ ಕನ್ನಡದಲ್ಲೂ ಸಿಗುತ್ತೆ ರೈಲು ಟಿಕೆಟ್‌

ಬೆಂಗಳೂರು : ಇನ್ನು ಮುಂದೆ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೇ ಮುದ್ರಣಗೊಂಡಿರುವ ರೈಲು ಟಿಕೆಟ್‌ ಪ್ರಯಾಣಿಕರ ಕೈ ಸೇರಲಿದೆ. ರೈಲ್ವೆಯಲ್ಲಿ ಕೊನೆಗೂ ಕನ್ನಡ ಭಾಷೆಗೆ ಸ್ಥಾನ ನೀಡಿದ್ದು, ಕನ್ನಡಿಗರ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ.

ನೈರುತ್ಯ ರೈಲ್ವೆಯು ಕನ್ನಡದಲ್ಲಿ ಪ್ರಾಯೋಗಿಕವಾಗಿ ಕಾಯ್ದಿರಿಸದ ಟಿಕೆಟ್‌ ಮುದ್ರಣಕ್ಕೆ ನಿರ್ಧರಿಸಿದ್ದು, ರೈಲ್ವೇ ಮಂಡಳಿಯ ಒಪ್ಪಿಗೆಗೆ ಕಳುಹಿಸಿರುವುದಾಗಿ ಕೇಂದ್ರ ರೈಲ್ವೇ ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದ್ದು, ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಕನ್ನಡದಲ್ಲಿ ಮುದ್ರಣಗೊಂಡಿರುವ ಟಿಕೆಟ್‌ ಫೋಟೋವನ್ನು ಪ್ರಕಟಿಸಿದ್ದಾರೆ.

 

Leave a Reply

Your email address will not be published.