‘ಬೆಂಗಳೂರಿನ ಜನತೆಗೆ ಲೆಕ್ಕಕೊಡಿ’ : ಕಾಂಗ್ರೆಸ್‌ ವಿರುದ್ಧ BJPಯಿಂದ ಚಾರ್ಜ್‌ಶೀಟ್‌ ಬಿಡುಗಡೆ

ಬೆಂಗಳೂರು : ಲೆಕ್ಕ ಕೊಡಿ ಬೆಂಗಳೂರು ಜನತೆಗೆ ಎಂಬ ಶೀರ್ಷಿಕೆಯಡಿ ಕಾಂಗ್ರೆಸ್‌ ವಿರುದ್ದ ಬಿಜೆಪಿ ನಾಯಕರು ಚಾರ್ಜ್‌ ಶೀಟ್‌ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್‌ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಗೂಂಡಾಗಳ ಸರ್ಕಾರ ನಡೆಯುತ್ತಿದೆ. ಗಾರ್ಡನ್ ಸಿಟಿ ಬೆಂಗಳೂರು ಗಾರ್ಬೇಜ್‌ ಸಿಟಿಯಾಗಿ ಮಾರ್ಪಾಡಾಗಿದೆ. ಇಷ್ಟ ವರ್ಷ ಒಳ್ಳೆಯದಕ್ಕೆ ಹೆಸರುವಾಸಿಯಾಗಿದ್ದ ಬೆಂಗಳೂರು ಈಗ ಅದಕ್ಕೆ ಸಂಪೂರ್ಣ ವಿರುದ್ದವಾಗಿದೆ ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದ್ದೇವೆ.

ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಹಾಳು ಮಾಡಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಬೆಂಗಳೂರು ರಕ್ಷಿಸಿ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಕೊಲೆಯಾದರೂ ಅದನ್ನು ಸ್ಕ್ರೂಡ್ರೈವರ್‌ನಿಂದ ಚುಚ್ಚಿದ್ದಷ್ಟೇ ಎಂದು ಗೃಹ ಸಚಿವರು ಹೇಳುತ್ತಾರೆ. ಇಂತಹ ಗೃಹ ಮಂತ್ರಿಯನ್ನು ನಾನೆಂದೂ ನೋಡಿಲ್ಲ ಎಂದಿದ್ದಾರೆ.

Leave a Reply

Your email address will not be published.