‘ದಿಗೂ ಎಂದರೆ ದಿಕ್ಕೆಟ್ಟ ಗುಲಾಮ’ – ದಿನೇಶ್‌ ಗುಂಡೂರಾವ್‌ಗೆ ಟಾಂಗ್‌ ಕೊಟ್ಟ BJP

ಬೆಂಗಳೂರು : ನಮೋ ಎಂದರೆ ನಮಗೆ ಮೋಸ ಎಂದಿದ್ದ ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ಗೆ ಬಿಜೆಪಿ ತಿರುಗೇಟು ನೀಡಿದೆ. ನಮೋ ಎಂದರೆ ನಮಗೆ ಮೋಸ ಎಂದಾದರೆ, ದಿಗೂ ಎಂದರೆ ದಿಕ್ಕೆಟ್ಟ ಗುಲಾಮ ಎಂದು ವ್ಯಂಗ್ಯಾ ಮಾಡಲಾಗಿದೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುವ ವೇಳೆ ದಿನೇಶ್‌ ಗುಂಡೂರಾವ್‌, ನರೇಂದ್ರ ಮೋದಿ ಸೀದಾ ರುಪಯ್ಯ ಸರ್ಕಾರ್‌ ಎಂದಿದ್ದರು, ಆದರೆ ನಮೋ ಎಂದರೆ ನಮಗೆ ಮೋಸ ಎಂದರ್ಥ. ನೋಟ್‌ ಬ್ಯಾನ್‌, ನೀರವ್‌ ಮೋದಿಯಂತಹವರಿಂದ ಬ್ಯಾಂಕ್‌ ಲೂಟಿಯಂತಹ ಪ್ರಕರಣಗಳಿಂದ ಜನರಿಗೆ ಮೋಸವಾಗಿದೆ ಎಂದಿದ್ದರು. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ದಿ ಗು ಎಂದರೆ ದಿಕ್ಕೆಟ್ಟ ಗುಲಾಮ ಎಂದು ಕರೆದಿದೆ. ದಿಗು ಅವರೇ ಗಾಂಧಿ ಕುಟುಂಬದ ಗುಲಾಮಗಿರಿ ಬಿಟ್ಟು ಸ್ವಾಭಿಮಾನದಿಂದ ಕನ್ನಡಿಗರಂತೆ ಬದುಕುವುದನ್ನು ಕಲಿಯಿಕಿ. ಯುವ ನಾಯಕ ಎಂಬ ಭ್ರಮೆಯಿಂದ ಹೊರಬಂದು ಪ್ರಬುದ್ಧ ರಾಜಕೀಯ ಕಲಿಯಿರಿ ಎಂದು ಟ್ವೀಟ್‌ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com