ನನ್ನನ್ನು ದೇವೆಗೌಡ್ರು ಬೆಳೆಸಿಲ್ಲ, ನಾನೇ ಸ್ವಂತ ಬಲದ ಮೇಲೆ ಬೆಳೆದಿದ್ದೀನಿ : ಸಿದ್ದರಾಮಯ್ಯ

ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ‘ ಪ್ರಧಾನಿ ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ. ಮೋದಿಯವರು ತಮ್ಮ ಸ್ಥಾನ ಮರೆತು ಕೀಳು ಮಟ್ಟಕ್ಕೆ ಇಳಿಸಬಾರದಿತ್ತು. ಮೋದಿ ಕೀಳು ಮಟ್ಡದ ರಾಜಕೀಯ ಮಾಡ್ತಾ ಇದ್ದಾರೆ ‘ ಎಂದಿದ್ದಾರೆ.

ಮೋದಿಗೆ ಭಷ್ಟ್ರಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ರೈತರನ್ನು ಕೊಂದವರನ್ನು ಮೋದಿ ರೈತ ಬಂಧು ಅಂತಾ ಬಿರುದು ಕೊಡ್ತಾರೆ. ಹಾವೇರಿಯಲ್ಲಿ ಗೋಲಿಬಾರ್ ಮಾಡಿಸಿ ರೈತರನ್ನು ಕೊಂದವರು ಯಾರು ಎಂದು ಪ್ರಶ್ನೆ ಮಾಡಿದ ಸಿಎಂ.

8 ವರ್ಷವಾದ್ರೂ ಗುಜರಾತನಲ್ಲಿ ಲೋಕಾಯುಕ್ತನ್ನು ನೇಮಕ ಮಾಡಿಲ್ಲ. ಯಡಿಯ್ಯೂರಪ್ಪ ಚೆಕ್ ಮುಖಾಂತರ ಲಂಚ ತೆಗೆದುಕೊಂಡಿದ್ದಾರೆ. ಪ್ರಧಾನಿಯವರು ಅವರು ಸ್ಥಾನ ಮತ್ತು ಘನತೆಯನ್ನು ಹಾಳು ಮಾಡಿದ್ದಾರೆ. ಲಲಿತ್ ಮೋದಿ, ನೀರವ್ ಮೋದಿ ಯವರನ್ನು ಯಾಕೆ ಓಡೋಗೊಕೆ ಬಿಟ್ಟರು.

ಮೋದಿ ಒಬ್ಬ ಚೌಕಿದಾರ ಅಂತಾರೆ. ನೀರವ್ ಮೋದಿ,ಲಲಿತಾ ಮೋದಿ ದೇಶ ಬಿಟ್ಟು ಹೋಗಲು ಪ್ರಧಾನಿ ಕುಮ್ಮಕ್ಕು ಕೊಟ್ಟಿದ್ದಾರೆ. ಮೋದಿಯವರು ದಾಖಲೆ ಕೊಟ್ಟು ಭ್ರಷ್ಟಾಚಾರ ದ ಬಗ್ಗೆ ಮಾತನಾಡಲಿ. ನಾವು ಜನರಿಗೆ ಲೇಕ್ಕ ಕೊಡ್ತೀವಿ, ಅಮಿತ್ ಶಾ ಗೆ ಅಲ್ಲ.

ಯಡಿಯ್ಯೂರಪ್ಪ ರೈತ ಬಂಧು ಅಲ್ಲ. ಇವರೆಲ್ಲಾ ಡೋಂಗಿಗಳು. ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ. ಮಹದಾಯಿ ಬಗ್ಗೆ ಪ್ರಧಾನಿ ಮೋದಿ ಮಾತ್ರ ಬಗೆಹರಿಸಬಹುದು.

‘ ಕುಮಾರಸ್ವಾಮಿ ಯವರು ಅಧಿಕಾರದಲ್ಲೆ ಇದ್ರು ಆವಾಗ ಏನು ಮಾಡಲಿಲ್ಲ. ನನ್ನನ್ನು ದೇವೆಗೌಡ್ರು ಬೆಳೆಸಿಲ್ಲ, ಯಾರು ಬೆಳೆಸಿಲ್ಲ. ನಾನೆ ನನ್ನ ಸ್ವಂತ ಬಲದ ಮೇಲೆ ಬೆಳೆದಿದ್ದೇನೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.