ಚಿರನಿದ್ರೆಗೆ ಜಾರಿದ ಚಂದ್ರಮುಖಿ : ಬಾರದ ಲೋಕಕ್ಕೆ ಶ್ರೀದೇವಿ ಪಯಣ

ಮುಂಬೈ : ದುಬೈನಲ್ಲಿ ಆಕಸ್ಮಿಕವಾಗಿ ಸಾವಿಗೀಡಾದ ಬಾಲಿವುಡ್‌ ಖ್ಯಾತ ನಟಿ ಶ್ರೀದೇವಿ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಬುಧವಾರ ಸಂಜೆ ಮುಂಬೈನ ವಿಲ್ಲೆ ಪಾರ್ಲೆಯ ರುದ್ರಭೂಮಿಯಲ್ಲಿ ಅಯ್ಯಂಗಾರ್‌ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆದಿದ್ದು, ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀದೇವಿ ಅವರ ಅಂತ್ಯ ಸಂಸ್ಕಾರ ನಡೆದಿದೆ. ಪತಿ ಬೋನಿ ಕಪೂರ್‌ ಅಂತಿಮ ವಿಧಿ ವಿಧಾನನೆರವೇರಿಸಿದ್ದಾರೆ.

ಶ್ರೀದೇವಿಗೆ ಬಿಳಿಯ ಹೂಗಳೆಂದರ ಇಷ್ಟ ಎಂಬ ಕಾರಣಕ್ಕೆ ಬಿಳಿಯ ಹೂಗಳಿಂದ ಅಲಂಕೃತವಾದ ವಾಹನದಲ್ಲಿ ಮೆರವಣಿಗೆಯ ಮೂಲಕ ವಿಲ್ಲೆ ಪಾರ್ಲೆ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು.
ಅವರಿಚ್ಛೆಯಂತೆ ಚಿನ್ನ ಲೇಪಿತ ಕೆಂಪು ಬಣ್ಣದ ಕಾಂಚೀವರಂ ಸೀರೆ ಉಡಿಸಿ, ಮಾಂಗಲ್ಯ ಸರದ ಜೊತೆ ತ್ರಿವರ್ಣ ಧ್ವಜ ಹೊದಿಸಿ ಮೆರವಣಿಗೆ ಮಾಡಲಾಗಿದೆ.
ನಟಿ ಶ್ರೀದೇವಿ ಫೆಬ್ರವರಿ 24ರಂದು ದುಬೈನಲ್ಲಿ ನಿಧನರಾಗಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ ಶ್ರೀದೇವಿ ಅವರು ಹೃದಯ ಸ್ತಂಭನದಿಂದಾಗಿ ಸಾವಿಗೀಡಾಗಿರುವುದಾಗಿ ಹೇಳಿದ್ದರೂ, ಬಳಿಕ ಹೋಟೆಲ್‌ನ ಬಾತ್‌ ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವಿಗೀಡಾಗಿರುವುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಯಲಾಗಿತ್ತಪ.

 

Leave a Reply

Your email address will not be published.

Social Media Auto Publish Powered By : XYZScripts.com