ಕಾಂಗ್ರೆಸ್‌ನಲ್ಲಿ ತಳಮಳ : ದೇವೇಗೌಡರಿಗೆ ಸ್ವಾಗತ ಕೋರಿದ ಕೈ ಶಾಸಕ !

ಕಲಬುರಗಿ : ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಹಿಂದೆ ಕಾಂಗ್ರೆಸ್ ಪಕ್ಷದ ವಿರುದ್ದ ಬಹಿರಂಗವಾಗಿಯೇ ಅಸಮಾಧಾಗೊಂಡಿದ್ದ ಕಲಬುರ್ಗಿಯ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ದೇವೇಗೌಡರು ಅಫ್ಜಲ್‌ಪುರ ಕ್ಷೇತ್ರದ ಭೇಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕ ಮಾಲೀಕಯ್ಯ ಗುತ್ತೇದಾರ್ ಎಚ್‌ಡಿಡಿಗೆ ಸ್ವಾಗತ ಕೋರಿ ಬಹುತೇಕ ಸ್ಥಳಗಳಲ್ಲಿ ಸ್ವಾಗತದ ಕಟೌಟ್‌ ಹಾಕಿಸಿದ್ದಾರೆ. ಈ ಕಟೌಟ್‌ನಲ್ಲಿ 22 ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರಕ್ಕೆ ಬರುತ್ತಿರುವ ಮಣ್ಣಿನ ಮಗ, ದೇಶಕಂಡ ಮಹಾನ್‌ ನಾಯಕ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರಿಗೆ ಮಾಲಿಕಯ್ಯ ಗುತ್ತೇದಾರ್‌ ಕುಟುಂಬ ಹಾಗೂ ರೈತ ಸಮುದಾಯ, ಗುತ್ತೇದಾರ್‌ ಅಭಿಮಾನಿಗಳಿಂದ ಹಾರ್ದಿಕ ಸ್ವಾಗತ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.

ಈ ಮೂಲಕ ಮಾಲಿಕಯ್ಯ ಗುತ್ತೇದಾರ್‌ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಕೈ ಹಿಡಿಯಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

 

One thought on “ಕಾಂಗ್ರೆಸ್‌ನಲ್ಲಿ ತಳಮಳ : ದೇವೇಗೌಡರಿಗೆ ಸ್ವಾಗತ ಕೋರಿದ ಕೈ ಶಾಸಕ !

  • February 28, 2018 at 11:44 PM
    Permalink

    ಎಷ್ಟು ಕೋಟಿ ಆಫರ್ ಅಂತೆ ?

    Reply

Leave a Reply

Your email address will not be published.

Social Media Auto Publish Powered By : XYZScripts.com