ಕಲಬುರಗಿ ಕೇಂದ್ರಿಯ ವಿದ್ಯಾಲಯದಲ್ಲಿ ಚಿಂತನ ಕಾರ್ಯಕ್ರಮ : ಮಕ್ಕಳ ಪ್ರತಿಭೆಯ ಅನಾವರಣ

ಕಲಬುರಗಿ : ಕಲಬುರಗಿಯ ಕೇಂದ್ರೀಯ ವಿವಿಯಲ್ಲಿ ಭಾರತ ಸ್ಕೌಟ್ಸ್-ಗೈಡ್ಸ್ ವತಿಯಿಂದ ಲಾರ್ಡ್‌ ಬೆಡನ್ ಪಾವೆಲ್‌ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಗಿತ್ತು. ಈ ದಿನವನ್ನು ಚಿಂತನ ದಿನವನ್ನಾಗಿ ಆಚರಣೆ ಮಾಡಿದ್ದು, ವಿವಿ. ಪ್ರಭಾರಿ ಪ್ರಾಂಶುಪಾಲರಾದ ಡಾ. ಕೆ. ಕೃಷ್ಣ ಅವರು, ಪಾವೆಲ್‌ ಹಾಗೂ ಲೇಡಿ ಪಾವೆಲ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಸ್ಕೌಟ್ಸ್‌-ಗೈಡ್ಸ್‌ನ ಮಕ್ಕಳು ಝಂಡಾ ಏರಿಸಿ ಪ್ರಾರ್ಥನೆ ಸಲ್ಲಿಸಿದರು. ಮಾಸ್ಟರ್‌ ಶ್ರೀಶ್‌, ಕುಮಾರಿ ಸಿಂಚನಾ, ಮಾಸ್ಟರ್ ಹರ್ಷಾ ಶುಕ್ಲಾ ಸ್ಕೌಟ್ಸ್-ಗೈಡ್ಸ್‌ ಬಗೆಗಿನ ವಿಚಾರ ವ್ಯಕ್ತ ಪಡಿಸಿದರು.

ಬಳಿಕ ಪ್ರಥಮ ಹಾಗೂ ದ್ವಿತೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರಮಾಣ ಪತ್ರವಿತರಿಸಲಾಯಿತು. ಇದೇ ವೇಳೆ ಸ್ಕೌಟ್ಸ್‌-ಗೈಡ್ಸ್‌ನಲ್ಲಿ ಸ್ವಯಂ ಚಾಲಿತ ಸಂಘವಿದೆ. ಇದರಲ್ಲಿ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ  ಭಾಗವಹಿಸಿ, ದೇಶಕ್ಕೆ ಸೇವೆ ಸಲ್ಲಿಸಬಹುದು ಎಂದು ಪ್ರಾಂಶುಪಾಲರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಯ ಗ್ರಂಥಪಾಲಕರಾದ ಶ್ರೀ ಕಲ್ಯಾಣಿ ಚವ್ಹಾಣ್‌, ವಿಜಯ್‌ ಕುಮಾರ್‌ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com