ದೂರವಾಯ್ತು ಆತಂಕ : ಕಲ್ಲುಬಂಡೆಗಳ ಮಧ್ಯೆ ಪತ್ತೆಯಾದ ಜ್ಯೋತಿರಾಜ್‌

ಸಾಗರ :  ಮೃತ ಯುವಕನ ಶವದ ಹುಡುಕಾಟಕ್ಕಾಗಿ ಜೋಗ ಜಲಪಾತಕ್ಕಿಳಿದಿದ್ದ ಜ್ಯೋತಿರಾಜ್‌ ಅಲಿಯಾಸ್‌ ಕೋತಿರಾಮ ಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯಿಂದಲೇ ಜ್ಯೋತಿರಾಜ್‌ಗಾಗಿ ಹುಡುಕಾಟ ನಡೆದಿತ್ತು. ಜಲಪಾತದ ಕೆಳಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು. ಅಲ್ಲದೆ ಅವರ ಹುಡುಕಾಟಕ್ಕಾಗಿ ಡ್ರೋಣ್ ಕ್ಯಾಮರಾವನ್ನು ಬಳಸಲಾಗಿತ್ತು.

ಹುಡುಕಾಟದ ವೇಳೆ ಜಲಪಾತದ ಬುಡದಲ್ಲಿ ಜ್ಯೋತಿರಾಜ್‌ ಬಂಡೆಗಳ ಮಧ್ಯೆ ಸಿಲುಕಿಕೊಂಡಿದ್ದು, ಕೈಗೆ ಗಾಯವಾಗಿತ್ತು. ಕ್ಯಾಮರಾದ ಮೂಲಕ ಜ್ಯೋತಿರಾಜ್‌ ಇರುವ ಜಾಗವನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದ್ದು, ಯುವಕನ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ಆದ್ದರಿಂದ ಯುವಕನ ಶವ ಹುಡುಕಲು ಜ್ಯೋತಿರಾಜ್‌ ಜಲಪಾತಕ್ಕೆ ಇಳಿದಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com