ಮುಂಬೈ ತಲುಪಿದ ಶ್ರೀದೇವಿ ಪಾರ್ಥಿವ ಶರೀರ : ಇಂದು ಮಧ್ಯಾಹ್ನ ಅಂತಿಮ ಸಂಸ್ಕಾರ

ಮುಂಬೈ : ದುಬೈನಲ್ಲಿ ಸಾವಿಗೀಡಾಗಿರುವ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರ ಮಂಗಳವಾರ ರಾತ್ರಿ ಮುಂಬೈಗೆ ಆಗಮಿಸಿದೆ. ಮಂಗಳವಾರ ರಾತ್ರಿ ದುಬೈನಿಂದ ರಾತ್ರಿ 7ಗಂಟೆಗೆ ಹೊರಟ ವಿಮಾನ ರಾತ್ರಿ 9.30ರ ಸುಮಾರಿಗ ಮುಂಬೈನ ಥತ್ರಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಬೋನಿ ಕಪೂರ್ ಅವರ ಸಹೋದರ ಅನಿಲ್‌ ಕಪೂರ್‌ ವಿಮಾನ ನಿಲ್ದಾಣದಿಂದ ಮೃತದೇಹವನ್ನು ಪಡೆದಿದ್ದಾರೆ. ಬಳಿಕ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್‌ನಲ್ಲಿ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು. ಇಂದು ಬೆಳಗ್ಗೆ 9.30ರಿಂದ ಮದ್ಯಾಹ್ನ 12.30ರವರೆಗೆ ಅಂಧೇರಿಯ ಸೆಲೆಬ್ರೇಷನ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ಮದ್ಯಾಹ್ನ 2ಗಂಟೆಗೆ ಕ್ಲಬ್‌ನಿಂದ ವಿಲೆ ಪಾರ್ಲೆ ಸೇವಾ ಸಮಾಜದತ್ತ ಅಂತಿಮ ಯಾತ್ರೆ ಶುರುವಾಗಲಿದ್ದು. 3.30ರ ಸುಮಾರಿಗೆ ವಿಲೆ ಪಾರ್ಲೆ ಸೇವಾ ಸಮಾಜದ ಶವಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಬೋನಿ ಕಪೂರ್‌ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಸಾಧ್ಯತೆ ಇದೆ. ಈಗಾಗಲೆ ಶಾರುಕ್‌ ಖಾನ್, ಕಮಲ್‌ ಹಾಸನ್‌, ಸಲ್ಮಾನ್ ಖಾನ್, ರಜಿನೀಕಾಂತ್‌ ಸೇರಿದಂತೆ ಬಾಲಿವುಡ್‌ ಗಣ್ಯರ ದಂಡು ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆಯಲು ಬರುತ್ತಿದೆ.

ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಶ್ರೀದೇವಿ ನಿವಾಸದ ಮುಂದೆ ಜಮಾಯಿಸಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com