ಚಿದಂಬರಂ ಪುತ್ರ ಕಾರ್ತಿಕ್ ಬಂಧನ ಸೇಡಿನ ಕ್ರಮ : ಮಲ್ಲಿಕಾರ್ಜುನ ಖರ್ಗೆ

ಚಿದಂಬರಂ ಅವರ ಪುತ್ರ ಕಾರ್ತೀಕ ಬಂಧನಕ್ಕೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ‘ ಐವತ್ತು ದಿನದಲ್ಲಿ ಕರ್ನಾಟಕ ಚುನಾವಣೆ ಇರುವಾಗ ಕಾರ್ತಿಕ್ ಬಂಧನ ಸೇಡಿನ ಕ್ರಮವಾಗಿದೆ. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಧೃತಿಗೆಡಿಸಲು ಈ ಕುತಂತ್ರ ಮಾಡಲಾಗಿದೆ ‘ ಎಂದಿದ್ದಾರೆ.

‘ ಈ ಹಿಂದೆ ಇಂದಿರಾಗಾಂಧಿ ಅವರಿಗೂ ಇದೇ ರೀತಿ ಕಿರುಕುಳ ನೀಡಿದರು. ಇವರು ಎಷ್ಟು ತೊಂದರೆ ಕೊಡ್ತಾರೋ ಕಾಂಗ್ರೆಸ್ ಗೆ ಅಷ್ಟು ಒಳ್ಳೆಯದು ‘ ಎಂದು ಕಲಬುರಗಿಯಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com