ಆಪತ್ತಿನಿಂದ ಪಾರಾದ BIGGBOSS ಖ್ಯಾತಿಯ ಭುವನ್‌ ಪೊನ್ನಪ್ಪ….ಆಗಿದ್ದೇನು…?

ಬಿಗ್ ಬಾಸ್‌ ಸೀಸನ್‌ 4ರ ಸ್ಪರ್ಧಿಯಾಗಿದ್ದ ಭುವನ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ರಾಂಧವ ಸಿನಿಮಾದ ಶೂಟಿಂಗ್ ವೇಳೆ ನಟ ಭುವನ್‌ ಪೊನ್ನಪ್ಪ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಹೆಸರುಘಟ್ಟದ ಬಳಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಭುವನ್‌ ರೋಪ್‌ ಹಾಕೇ ಸ್ಟಂಟ್‌ ಮಾಡಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದ ಗಾಯಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಭುವನ್‌ ಅವರ ಮೂಗು ಹಾಗೂ ಸೊಂಟಕ್ಕೆ ಗಂಭೀರ ಗಾಯವಾಗಿರುವುದಾಗಿ ತಿಳಿದುಬಂದಿದೆ. ಸದ್ಯ ಭುವನ್‌ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಂಧವ ಸಿನಿಮಾದಲ್ಲಿ ಭುವನ್‌ 3 ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಸುನಿಲ್‌ ಆಚಾರ್ಯ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com