BBMP ಬಜೆಟ್‌ : ಪತ್ರಕರ್ತರಿಗೆ ವಿಮೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು

ಬೆಂಗಳೂರು : ಬಿಬಿಎಂಪಿಯ 2018-19ರ ಸಾಲಿನ ಬಜೆಟ್ ಮಂಡನೆಯಾಗಿದೆ. ಬುಧವಾರ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಒಟ್ಟು 9300 ಕೋಟಿ ರೂಗಳ ಗಾತ್ರದ ಬಜೆಟ್ ಇದಾಗಿದ್ದು, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟನ್ನು ಮಂಡಿಸಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಬಡವರು, ಹಿಂದುಳಿದವರು, ಹಾಗೂ ಮಧ್ಯಮವರ್ಗದವರನ್ನು ಸೆಳೆಯುವ ಕೆಲಸ ೋಮಾಡಲಾಗಿದೆ. ಆರೋಗ್ಯ ಸೇವೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪಾಲಿಕೆಯ ಶಾಲಾ-ಕಾಲೇಜುಗಳ ಅಭಿವೃದ್ಧಿ, ಎಸ್‌ಎಸ್‌ಎಲ್‌ಸಿ, ಪಿಯುಸಿಯನ್ನು ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪ್ರಕಟಿಸಲಾಗಿದೆ.

ಬಜೆಟ್ ಮುಖ್ಯಾಂಶಗಳು

ಸೈನಿಕರ ಮನೆಗಳಿಗೆ ಆಸ್ತಿ ತೆರಿಗೆ ವಿನಾಯಿತಿ

ಪತ್ರಕರ್ತರಿಗೆ ಆರೋಗ್ಯ ರಕ್ಷಣೆಯ ಸಾಮೂಹಿಕ ವಿಮೆ

ಮೇಖ್ರಿ ಸರ್ಕಲ್‌ನಲ್ಲಿ ಸಂದೀಪ್‌ ಉನ್ನಿಕೃಷ್ಣನ್‌, ಅಕ್ಷಯ್ ಗಿರೀಶ್‌ ಕುಮಾರ್‌ ಪ್ರತಿಮೆಗೆ ಒಂದು ಕೋಟಿ ರೂ ಮೀಸಲು.

24 ಪಾಲಿಕೆಯ ಹೆರಿಗೆ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಯಲ್ಲಿ ಜನಿಸುವ ಮೊದಲ ಮಗುವಿಗೆ ಶಿಕ್ಷಣಕ್ಕೆ 5 ಲಕ್ಷ ಠೇವಣಿಗೆ 1.2 ಕೋಟಿ ರೂ ಮೀಸಲು

ಪಶು ಶಾಲೆಗೆ 1.6 ಕೋಟಿ ರೂ ಮೀಸಲು

ಬಿಬಿಎಂಪಿ ಶಾಲೆಯ ವಿದ್ಯಾರ್ಥಿಗಳ ವಿಮೆ ಬದಲಾಗಿ ಚಿಕಿತ್ಸಾ ವೆಚ್ಚಕ್ಕೆ 2 ಕೋಟಿ ಠೇವಣಿ

ಅತೀ ಹೆಚ್ಚು ಅಂಕಗಳಿಸಿದ 10 ನೇ ತರಗತಿ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ಪಿಯುಸಿಯ 100 ವಿದ್ಯಾರ್ಥಿಗಳಿಗೆ ನಗದು ಬಹುಮಾನ

ಬಿಬಿಎಂಪಿ ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಕ್ಕೆ 5 ಕೋಟಿ

ಬಡ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಕ್ಕೆ 1 ಕೋಟಿ ರೂ

ಬಿಬಿಎಂಪಿ ಕಾರ್ಯಕ್ರಮಗಳಿಗೆ 58 ಕೋಟಿ ರೂ

ಉದ್ಯಾನ ನಿರ್ವಹಣೆಗೆ 40 ಕೋಟಿ ರೂ ಮೀಸಲು

Leave a Reply

Your email address will not be published.

Social Media Auto Publish Powered By : XYZScripts.com