ವಕೀಲೆಯಿಂದ ವಕೀಲನ ಹತ್ಯೆಗೆ ಸುಪಾರಿ…. ಹೀನ ಕೃತ್ಯಕ್ಕೆ ಸಾಕ್ಷಿಯಾದ ಬಾಗಲಕೋಟೆ

ಬಾಗಲಕೋಟೆ : ವಕೀಲೆಯೇ ಮತ್ತೊಬ್ಬ ವಕೀಲರನ್ನು ಕೊಲ್ಲಲು ಸುಪಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದ ವಕೀಲ ಮೋಹನ್‌ ಪಾಟೀಲ್‌ ಎಂಬುವವರ ಮೇಲೆ ಸುಪಾರಿ ಹಂತಕರು ಮಚ್ಚು, ಕೋಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಸುಪಾರಿ ನೀಡಿದ್ದ ವಕೀಲೆಯನ್ನು ಸೌಂದರ್ಯ ಹಳ್ಳದ್‌ ಎಂದು ಹೆಸರಿಸಲಾಗಿದೆ. ವಕೀಲ ಮೋಹನ್ ಹಾಗೂ ಸೌಂದರ್ಯ ಇವರಿಬ್ಬರೂ ಹುನಗುಂದ ತಾಲ್ಲೂಕು ನ್ಯಾಯಾಲಯದ ವಕೀಲರಾಗಿದ್ದು, ಕಳೆದ ಮೂರು ತಿಂಗಳ ಹಿಂದಷ್ಟೇ ಸೌಂದರ್ಯ, ಮೋಹನ್ ಪಾಟೀಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಬಳಿಕ ಮೋಹನ್‌ ತನ್ನ ಇ-ಮೇಲ್‌ ಹ್ಯಾಕ್‌ ಮಾಡಿರುವುದಾಗಿ ಆರೋಪಿಸಿದ್ದರು. ಇವರಿಬ್ಬರ ಮಧ್ಯೆ ಆಸ್ತಿ ವಿಚಾರದಲ್ಲೂ ವೈಮನಸ್ಸಿತ್ತು ಎಂದು ಹೇಳಲಾಗಿದೆ.

ಮಂಗಳವಾರ ರಾತ್ರಿ ಬೈಕ್‌ನಲ್ಲಿ ಬಂದ ಸುಪಾರಿ ಹಂತಕರು ಮೋಹನ್‌ ಮೇಲೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನ ಬಾಗಲಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

 

Leave a Reply

Your email address will not be published.