Cricket : ಕರ್ನಾಟಕದ ವೇಗದ ಬೌಲರ್ ಎಸ್. ಅರವಿಂದ್ ವಿದಾಯ

ಕರ್ನಾಟಕದ ಎಡಗೈ ವೇಗದ ಬೌಲರ್ ಶ್ರೀನಾಥ್ ಅರವಿಂದ್ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮಂಗಳವಾರ ವಿದಾಯ ಹೇಳಿದ್ದಾರೆ. ಮಂಗಳವಾರ ನಡೆದ ವಿಜಯ್ ಹಜಾರೆ ಟ್ರೋಫಿಯ ಫೈನಲ್ ನಲ್ಲಿ ಸೌರಾಷ್ಟ್ರ ತಂಡವನ್ನು ಮಣಿಸಿ ಕರ್ನಾಟಕ ಚಾಂಪಿಯನ್ ಆದ ನಂತರ ಅರವಿಂದ್ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅರವಿಂದ್ ‘ ನಾನು ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಗೆಲುವಿನೊಂದಿಗೆ ವಿದಾಯ ಹೇಳಬೇಕೆಂಬುದು ನನ್ನ ಬಯಕೆಯಾಗಿತ್ತು. ನಮ್ಮ ತಂಡ ವಿಜಯ್ ಹಜಾರೆ ಟ್ರೋಫಿ ಗೆದ್ದಿರುವುದರಿಂದ ಇದು ಸರಿಯಾದ ಸಮಯವಾಗಿದೆ. ಮುಂಬರುತ್ತಿರುವ ಪ್ರತಿಭಾವಂತ ಆಟಗಾರರಿಗೆ ಅಡ್ಡಿಯಾಗಲು ಬಯಸುವುದಿಲ್ಲ ‘ ಎಂದು ಹೇಳಿದ್ದಾರೆ.

2015 ರಲ್ಲಿ ಧರ್ಮಾಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಅರವಿಂದ್ ಭಾರತವನ್ನು ಪ್ರತಿನಿಧಿಸಿದ್ದರು. ಈ ಪಂದ್ಯದಲ್ಲಿ 44 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಒಟ್ಟು 56 ಮೊದಲ ದರ್ಜೆಯ ಪಂದ್ಯಗಳನ್ನಾಡಿರುವ ಅರವಿಂದ್ 186 ವಿಕೆಟ್ ಪಡೆದಿದ್ದಾರೆ. 84 ಟಿ20 ಪಂದ್ಯಗಳಲ್ಲಿ ಆಡಿ 103 ವಿಕೆಟ್ ಕಬಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com